ಇಂಗ್ಲೆಂಡ್ ವಿರುದ್ಧ ಪೊಡೊಲಸ್ಕಿ ವಿದಾಯದ ಪಂದ್ಯ

Update: 2017-03-21 17:47 GMT

 ಡಾರ್ಟ್‌ಮಂಡ್(ಜರ್ಮನಿ), ಮಾ.21: ಇಂಗ್ಲೆಂಡ್ ವಿರುದ್ಧ ಬುಧವಾರ ನಡೆಯಲಿರುವ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಜರ್ಮನಿಯ ಲುಕಾಸ್ ಪೊಡೊಲಸ್ಕಿ ವಿದಾಯದ ಪಂದ್ಯವನ್ನಾಡಲಿದ್ದಾರೆ.

 ತನ್ನ 130ನೆ ಹಾಗೂ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪೊಡೊಲ್‌ಸ್ಕಿ ಜರ್ಮನಿ ತಂಡವನ್ನು ನಾಯಕನಾಗಿ ಮುನ್ನಡೆಸುವ ಗೌರವವನ್ನು ಪಡೆದಿದ್ದಾರೆ.

‘‘ಇದು ತುಂಬಾ ಸೂಕ್ಷ್ಮ ವಿಚಾರ. ನಾವು ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬಾರದು. ನನ್ನ ಕೊನೆಯ ಪಂದ್ಯ ಸ್ಮರಣೀಯವಾಗಿರುವ ವಿಶ್ವಾಸವಿದೆ. ಅಭಿಮಾನಿಗಳ ಸಮ್ಮುಖದಲ್ಲಿ ವಿದಾಯ ಹೇಳುತ್ತಿರುವುದಕ್ಕೆ ಬೇಸರದ ಜೊತೆಗೆ ಸಂತೋಷವಾಗುತ್ತಿದೆ’’ ಎಂದು 2004ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಕಾಲಿಟ್ಟಿದ್ದ 31ರ ಹರೆಯದ ಪೊಡೊಲಸ್ಕಿ ಹೇಳಿದ್ದಾರೆ.

ವಿಶ್ವ ಚಾಂಪಿಯನ್ ಜರ್ಮನಿ ತಂಡ ಕೆಲವು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಸೌಹಾರ್ದ ಪಂದ್ಯವನ್ನಾಡಲಿದೆ. ಖಾಯಂ ನಾಯಕ ಮ್ಯಾನುಯಲ್ ನೆಯರ್, ಮರಿಯೊ ಗೊಮೆಝ್, ಮೆಸುಟ್ ಒಝಿಲ್ ಹಾಗೂ ಜುಲಿಯನ್ ಡ್ರಕ್ಸಿಯೆರ್ ಗಾಯಗೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News