ನಾಲ್ಕನೆ ಟೆಸ್ಟ್: ಇಶಾಂತ್ ಬದಲಿಗೆ ಶಮಿ
Update: 2017-03-24 23:54 IST
ಧರ್ಮಶಾಲಾ, ಮಾ.24: ಬಂಗಾಳದ ವೇಗದ ಬೌಲರ್ ಮುಹಮ್ಮದ್ ಶಮಿ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯಕ್ಕೆ ಭಾರತೀಯ ಟೆಸ್ಟ್ ತಂಡಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಶಮಿ ವೇಗದ ಬೌಲರ್ ಇಶಾಂತ್ ಶರ್ಮ ಬದಲಿಗೆ ಆಡುವುದು ಬಹುತೇಕ ಖಚಿತವಾಗಿದೆ.
ದಿಲ್ಲಿ ವೇಗಿ ಇಶಾಂತ್ ಸರಣಿಯುದ್ದಕ್ಕೂ ವಿಕೆಟ್ ಕೊರತೆ ಎದುರಿಸಿದ್ದ್ದು ಇದು ಭಾರತ ತಂಡಕ್ಕೆ ಚಿಂತೆಗೀಡು ಮಾಡಿತ್ತು. ಶಮಿಯ ಸೇರ್ಪಡೆ ಸ್ವಾಗತಾರ್ಹ ಹೆಜ್ಜೆಯಾಗಿದೆ.
ಶಮಿ ಇತ್ತೀಚೆಗೆ ನಡೆದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ 26 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.
ಶಮಿ ಹಾಗೂ ಶ್ರೇಯಸ್ ಅಯ್ಯರ್ ಇದೀಗ ತಂಡದ ಅಧಿಕೃತ ಸದಸ್ಯರಾಗಿದ್ದು, ಇಬ್ಬರೂ ಅಂತಿಮ 11ರ ಬಳಗಕ್ಕೆ ಸೇರ್ಪಡೆಯಾಗಲು ಅರ್ಹರಾಗಿದ್ದಾರೆ ಎಂದು ಬಿಸಿಸಿಐ ಶುಕ್ರವಾರ ದೃಢಪಡಿಸಿದೆ.