×
Ad

ಇಂಗ್ಲೆಂಡ್ ಸ್ಪಿನ್ ಸಲಹೆಗಾರನಾಗಿ ಸಕ್ಲೇನ್ ಮುಶ್ತಾಕ್ ನೇಮಕ

Update: 2017-03-25 22:01 IST

ಕರಾಚಿ, ಮಾ.25: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಪಾಕಿಸ್ತಾನದ ಮಾಜಿ ಆಫ್-ಸ್ಪಿನ್ನರ್ ಸಕ್ಲೇನ್ ಮುಶ್ತಾಕ್‌ರನ್ನು ಎರಡು ವರ್ಷಗಳ ಅವಧಿಗೆ ಸ್ಪಿನ್ ಸಲಹೆಗಾರರನ್ನಾಗಿ ನೇಮಕ ಮಾಡಿದೆ.

‘‘ಇಸಿಬಿ ನನ್ನೊಂದಿಗೆ 2 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ನಾನು ಇಸಿಬಿಯೊಂದಿಗೆ ವರ್ಷಕ್ಕೆ 100 ದಿನ ಕೆಲಸ ಮಾಡುವೆ. ನನಗೆ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಪ್ರಮುಖ ಕೆಲಸ ವಿರುತ್ತದೆ. ಇಂಗ್ಲೆಂಡ್‌ನ ಯುವ ಹಾಗೂ ಉದಯೋನ್ಮುಖ ಆಟಗಾರರೊಂದಿಗೂ ನಾನು ಕೆಲಸ ಮಾಡುವೆ’’ ಎಂದು ಸಕ್ಲೇನ್ ‘ಡಾನ್’ಪತ್ರಿಕೆಗೆ ತಿಳಿಸಿದ್ದಾರೆ.

ಸಕ್ಲೇನ್ ಈ ಹಿಂದೆ ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಂಡಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ‘ದೂಸ್ರಾ’ ಎಸೆತವನ್ನು ವಿಶ್ವ ಕ್ರಿಕೆಟ್‌ಗೆ ಪರಿಚಿಯಿಸಿರುವ ಸಕ್ಲೇನ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ಸ್ಪಿನ್ ವಿಭಾಗ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News