×
Ad

ವಿಶ್ವಕಪ್ ಅರ್ಹತಾ ಪಂದ್ಯ: ಇಟಲಿಗೆ ಜಯ

Update: 2017-03-25 22:03 IST

 ಪಾಲೆರ್ಮೊ, ಮಾ.25: ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಲ್ಬಾನಿಯ ಅಭಿಮಾನಿಗಳು ಪಿಚ್‌ಗೆ ಬೆಂಕಿ ಉಂಡೆ ಎಸೆದು ಪಂದ್ಯಕ್ಕೆ ಅಡ್ಡಿಪಡಿಸಿದರೂ ಇಟಲಿ ತಂಡ ಅಲ್ಬೇನಿಯ ತಂಡವನ್ನು 2-0 ಅಂತರದಿಂದ ಮಣಿಸಿತು.

  ಅಲ್ಬೇನಿಯ ಬೆಂಬಲಿಗರ ದಾಂಧಲೆಯಿಂದಾಗಿ 6 ನಿಮಿಷ ಸ್ಥಗಿತಗೊಂಡಿದ್ದ ಪಂದ್ಯದಲ್ಲಿ ಇಟಲಿಯ ಪರ ಡೇನಿಯಲ್ ಡಿ ರೊಸ್ಸಿ (12ನೆ ನಿಮಿಷ)ಹಾಗೂ ಸಿರೊ(80ನೆ ನಿ.) ತಲಾ ಒಂದು ಗೋಲು ಬಾರಿಸಿದರು. ಈ ಮೂಲಕ ಒಟ್ಟು 13 ಅಂಕ ಗಳಿಸಿದ ಇಟಲಿ ಅಂಕಪಟ್ಟಿಯಲ್ಲಿ ಸ್ಪೇನ್‌ನೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿತು.

39ರ ಹರೆಯದ ಇಟಲಿಯ ಹಿರಿಯ ಗೋಲ್‌ಕೀಪರ್ ಗಿಯಾನ್‌ಲುಗಿ ಬಫನ್ ವೃತ್ತಿಬದುಕಿನಲ್ಲಿ 1000ನೆ ಪಂದ್ಯದಲ್ಲಿ ಕಾಣಿಸಿಕೊಂಡರು. ಇಟಲಿಯ ಪರ 168ನೆ ಪಂದ್ಯವನ್ನು ಆಡಿದ ಬಫನ್ ಈ ಮೂಲಕ ಗರಿಷ್ಠ ಪಂದ್ಯಗಳನ್ನಾಡಿದ ಯುರೋಪ್ ಮೊದಲ ಆಟಗಾರ ಎನಿಸಿಕೊಂಡರು.

  ಡಿರೊಸ್ಸಿ ಪೆನಾಲ್ಟಿ ಪಡೆಯಲು ಕಾಯುತ್ತಿದ್ದ ವೇಳೆ ಅಲ್ಬೇನಿಯಾ ಅಭಿಮಾನಿಗಳು ಮೊದಲ ಬಾರಿ ಬೆಂಕಿ ಉಂಡೆಯನ್ನು ಪಿಚ್‌ನತ್ತ ಎಸೆದರು. ದ್ವಿತೀಯಾರ್ಧದಲ್ಲಿ ಅಲ್ಬಾನಿಯ ತಂಡದ ಬೆಂಬಲಿಗರ ಹುಚ್ಚಾಟ ಮಿತಿಮೀರಿದಾಗ 8 ನಿಮಿಷ ಪಂದ್ಯ ಸ್ಥಗಿತಗೊಂಡಿತು. ಅಲ್ಬೇನಿಯ ಆಟಗಾರರು ತಮ್ಮ ಅಭಿಮಾನಿಗಳ ಬಳಿ ವಿನಂತಿಸಿಕೊಂಡ ಬಳಿಕ ಪಂದ್ಯ ಪುನರಾರಂಭಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News