ಅಂತಿಮ ಟೆಸ್ಟ್ : ಆಸ್ಟ್ರೇಲಿಯ 2 ನೆ ಇನಿಂಗ್ಸ್ ನಲ್ಲಿ 106/6(33 ಓವರ್)
Update: 2017-03-27 14:55 IST
ಧರ್ಮಶಾಲಾ, ಮಾ.27 : ಇಲ್ಲಿ ನಡೆಯುತ್ತಿರುವ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯದ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ಮೊದಲ ಇನಿಂಗ್ಸ್ ನಲ್ಲಿ 32 ರನ್ ಗಳ ಮುನ್ನಡೆ ಸಾಧಿಸಿದ ಭಾರತ ಎರಡನೆ ಇನಿಂಗ್ಸ್ ನಲ್ಲಿ 33ಓವರ‍್ ಗಳಲ್ಲಿ 106ರನ್ ಗಳಿಗೆ ಆಸ್ಟ್ರೇಲಿಯದ 6ವಿಕೆಟ್ ಗಳನ್ನು ಉಡಾಯಿಸಿ ಒತ್ತಡಕ್ಕೆ ಸಿಲುಕಿಸಿದೆ.
ಉಮೇಶ್ ಯಾದವ್, ಭುವನೇಶ್ವರ ಕುಮಾರ್ . ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ದಾಳಿಗೆ ಸಿಲುಕಿದ ಆಸ್ಟ್ರೇಲಿಯದ ರೆನ್ ಶಾ (8), ಡೇವಿಡ್ ವಾರ್ನರ್(6), ನಾಯಕ ಸ್ಟೀವ್ ಸ್ಮಿತ್(17), ಹ್ಯಾಂಡ್ಸ್ ಕಂಬ್(18)ಶಾನ್ ಮಾರ್ಷ್ (1) ಮತ್ತು ಮ್ಯಾಕ್ಸ್‌ವೆಲ್ (43) ಅವರ ವಿಕೆಟ್ ನ್ನು ಔಟಾಗಿದ್ದಾರೆ. ವೇಡ್ 6 ರನ್ ಗಳಿಸಿ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ.