ನಾಲ್ಕನೆ ಟೆಸ್ಟ್: ಭಾರತದ ಗೆಲುವಿಗೆ 106 ರನ್ ಗುರಿ
ಧರ್ಮಶಾಲಾ, ಮಾ.27: ಭಾರತದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯ ತಂಡ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ 53.2 ಓವರ್‌ಗಳಲ್ಲಿ ಕೇವಲ 137 ರನ್‌ಗಳಿಗೆ ಆಲೌಟಾಯಿತು. ಆತಿಥೇಯರ ಗೆಲುವಿಗೆ 106 ರನ್ ಗುರಿ ನೀಡಿತು.
ಮೂರನೆ ದಿನದಾಟದಲ್ಲಿ ಟೀಮ್ ಇಂಡಿಯದ ಪರ ಅಶ್ವಿನ್(3-29), ರವೀಂದ್ರ ಜಡೇಜ(3-24) ಹಾಗೂ ಉಮೇಶ್ ಯಾದವ್(3-29) ತಲಾ 3 ವಿಕೆಟ್‌ಗಳನ್ನು ಪಡೆದರೆ, ಭುವನೇಶ್ವರ್ ಕುಮಾರ್(1-27) ಒಂದು ವಿಕೆಟ್ ಪಡೆದರು.
ಆಸೀಸ್‌ನ ಪರ ಆಲ್‌ರೌಂಡರ್ ಮ್ಯಾಕ್ಸ್‌ವೆಲ್(45) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮ್ಯಾಥ್ಯೂ ವೇಡ್ ಅಜೇಯ 25 ರನ್ ಗಳಿಸಿದರು. ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಸ್ಟೀವನ್ ಸ್ಮಿತ್ ಕೇವಲ 17 ರನ್ ಗಳಿಸಿ ಭುವನೇಶ್ವರ್‌ಗೆ ಕ್ಲೀನ್ ಬೌಲ್ಡಾದರು. ಹ್ಯಾಂಡ್ಸ್‌ಕಂಬ್ 18 ರನ್ ಗಳಿಸಿದರು. ಉಳಿದ ಬ್ಯಾಟ್ಸ್‌ಮನಗಳು ಪೆವಿಲಿಯನ್‌ಗೆ ಪರೇಡ್ ನಡೆಸಿದರು.
ಮೊದಲ ಇನಿಂಗ್ಸ್‌ನಲ್ಲಿ 332 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ನೇತೃತ್ವದ ಭಾರತ 32 ರನ್ ಮುನ್ನಡೆ ಪಡೆದಿತ್ತು. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 300 ರನ್ ಗಳಿಸಿ ಆಲೌಟಾಗಿತ್ತು.