×
Ad

ಭಾರತದ ಸ್ಪೆಷಲ್ ಒಲಿಂಪಿಕ್ಸ್ಸ್ ಚಾಂಪಿಯನ್ನರಿಗೆ ಅಭಿನಂದನೆ

Update: 2017-03-27 23:22 IST

ಹೊಸದಿಲ್ಲಿ, ಮಾ.27: ಆಸ್ಟ್ರೀಯದಲ್ಲಿ ನಡೆದ ಚಳಿಗಾಲದ ಸ್ಪೆಷಲ್ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾರತೀಯ ತಂಡ 73 ಪದಕಗಳನ್ನು ಜಯಿಸಿದ್ದು, ಸೋಮವಾರ ಇಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪದಕ ವಿಜೇತರನ್ನು ಅಭಿನಂದಿಸಲಾಯಿತು.

ವಿಶೇಷ ಒಲಿಂಪಿಕ್ಸ್‌ನಲ್ಲಿ 105ಕ್ಕೂ ಅಧಿಕ ದೇಶಗಳ 2,600 ಸ್ಪರ್ಧಾಳುಗಳು ಭಾಗವಹಿಸಿದ್ದು, ಈ ಪೈಕಿ ಭಾರತದ ಅಥ್ಲೀಟ್‌ಗಳು 37 ಚಿನ್ನ, 10 ಬೆಳ್ಳಿ ಹಾಗೂ 26 ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಒಲಿಂಪಿಕ್ಸ್ ಚಾಂಪಿಯನ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಐದು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಎಂಸಿ ಮೇರಿಕೊಮ್, ಶೂಟರ್ ಹೀನಾ ಸಿಧು ಹಾಗೂ ವಿಶ್ವದ ಮಾಜಿ ನಂ.1 ಶಟ್ಲರ್ ಸೈನಾ ನೆಹ್ವಾಲ್ ಭಾಗವಹಿಸಿದ್ದರು. ಇವರೆಲ್ಲರೂ ಸಾಧಕರಿಗೆ ಶುಭಾಶಯ ಕೋರಿದರು.

ಮಾ.18 ರಿಂದ 24ರ ತನಕ ನಡೆದ ಒಲಿಂಪಿಕ್ ಗೇಮ್ಸ್‌ನಲ್ಲಿ ಒಟ್ಟು 89 ಅಥ್ಲೀಟ್‌ಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News