ಮಿಯಾಮಿ ಓಪನ್: 1000ನೆ ಪಂದ್ಯ ಜಯಿಸಿದ ನಡಾಲ್
Update: 2017-03-27 23:25 IST
ಮಿಯಾಮಿ, ಮಾ.27: ಜರ್ಮನಿಯ ಹಿರಿಯ ಆಟಗಾರ ಫಿಲಿಪ್ ಕೊಹ್ಲ್‌ಶ್ರೈಬರ್‌ರನ್ನು ಮಣಿಸಿದ ಸ್ಪೇನ್‌ನ ರಫೆಲ್ ನಡಾಲ್ ಮಿಯಾಮಿ ಓಪನ್‌ನಲ್ಲಿ ನಾಲ್ಕನೆ ಸುತ್ತಿಗೆ ಪ್ರವೇಶಿಸಿದ್ದಾರೆ. ನಡಾಲ್ ಜಯಿಸಿರುವ 1000ನೆ ಪಂದ್ಯ ಇದಾಗಿದೆ.
ಇಲ್ಲಿ ರವಿವಾರ ನಡೆದ ಮೂರನೆ ಸುತ್ತಿನ ಪಂದ್ಯದಲ್ಲಿ ನಡಾಲ್ ಅವರು ವಿಶ್ವದ ನಂ.31ನೆ ಆಟಗಾರ ಫಿಲಿಪ್‌ರನ್ನು 6-2, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸಾವಿರ ಪಂದ್ಯ ಗೆದ್ದ ಸರದಾರನಾಗಿ ಹೊರಹೊಮ್ಮಿದರು. ಈ ಮೂಲಕ 1000 ಪಂದ್ಯಗಳನ್ನು ಜಯಿಸಿರುವ 11 ಆಟಗಾರರ ಗುಂಪಿಗೆ ಸೇರ್ಪಡೆಯಾದರು. ‘‘ಸಾವಿರ ಪಂದ್ಯಗಳನ್ನು ಜಯಿಸಿರುವುದಕ್ಕೆ ಸಂತೋಷವಾಗುತ್ತಿದೆ. ದೀರ್ಘ ವೃತ್ತಿಜೀವನದಲ್ಲಿ ಇದೊಂದು ಸಿಹಿ ಸುದ್ದಿಯಾಗಿದೆ.ನಾನು ಆಡಿದ ಮೊದಲ ಪಂದ್ಯ ನನಗೀಗಲೂ ನೆನಪಿದೆ’’ ಎಂದು 30ರ ಹರೆಯದ ನಡಾಲ್ ಹೇಳಿದ್ದಾರೆ.