×
Ad

ವಿಂಡೀಸ್‌ನ ವಾಲ್ಟನ್ ಡಿಕ್ಕಿ ಹೊಡೆದು ಪಾಕ್‌ನ ಅಹ್ಮದ್‌ ಶೆಹ್‌ಝಾದ್‌ಗೆ ಗಾಯ

Update: 2017-03-31 12:47 IST


ಪೊರ್ಟ್‌ ಆಫ್‌ ಸ್ಪೇನ್‌, ಮಾ.31 ಇಲ್ಲಿ  ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೆ ಟ್ವೆಂಟಿ-೨೦ ಪಂದ್ಯದ ವೇಳೆ ವಿಂಡೀಸ್ ಆಟಗಾರನಿಗೆ ಡಿಕ್ಕಿ ಹೊಡೆದು ಪಾಕಿಸ್ತಾನದ ಆರಂಭಿಕ ದಾಂಡಿಗ ಅಹ್ಮದ್‌ ಶೆಹ್‌ ಝಾದ್ ಗಾಯಗೊಂಡಿದ್ದಾರೆ.
ಗುರುವಾರ ನಡೆದ ಪಂದ್ಯದ ವೇಳೆ ಈ ಘಟನೆ ನಡೆದಿದ್ದು ಗಂಭೀರ ಗಾಯಗೊಂಡಿರುವ ಶೆಹ್‌ ಝಾದ್  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
4ನೆ ಓವರ್‌ ನಲ್ಲಿ ಸೊಯೈಲ್‌ ತನ್ವೀರ್‌ ಅವರ  ಕೊನೆಯ ಎಸೆತದಲ್ಲಿ ವೆಸ್ಟ್‌ ಇಂಡೀಸ್‌ ಮರ್ಲಾನ್‌ ಸ್ಯಾಮುವೆಲ್ಸ್‌ ಅವರು ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದ ಚಾಡ್‌ವಿಕ್‌ ವಾಲ್ಟನ್‌ ನೆರವಿನಲ್ಲಿ 1  ರನ್‌  ಗಳಿಸಲು ಯತ್ನಿಸಿದರು. ಆಗ ಚೆಂಡನ್ನು ಹಿಡಿಯವ ಯತ್ನದಲ್ಲಿದ್ದ ಫೀಲ್ಡರ್‌ ಶೆಹ್ ಝಾದ್‌ ಅವರು ಬ್ಯಾಟ್ಸ್‌ಮನ್‌ ವಾಲ್ಟನ್‌ಗೆ ಡಿಕ್ಕಿ ಹೊಡೆದರು. ಇದರಿಂದಾಗಿ ಇಬ್ಬರೂ ಕ್ರೀಸ್‌ ಬಳಿ ಕುಸಿದು ಬಿದ್ದರು. ಆಗ ವಾಲ್ಟನ್‌ ಅವರ ಕಾಲು ಅಹ್ಮದ್‌ ಶೆಹ್‌ಝಾದ್‌  ಕುತ್ತಿಗೆಗೆ ಬಡಿಯಿತು ಎನ್ನಲಾಗಿದೆ.
ಇದರಿಂದ ಗಾಯೊಂಡ ಶೆಹ್‌ಝಾದ್‌ ಅವರು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ  ದಾಖಲಿಸಲಾಯಿತು.ಅಲ್ಲಿ ಚಿಕಿತ್ಸೆ ಪಡೆದ ಶೆಹ್‌ಝಾದ್‌ ಮತ್ತೆ ವಾಪಸಾಗಿ ಆಟದಲ್ಲಿ ಸೇರಿಕೊಂಡರು ಎಂದು ತಿಳಿದು ಬಂದಿದೆ.
ಪಾಕಿಸ್ತಾನ ಈ ಪಂದ್ಯದಲ್ಲಿ 132 ರನ್‌ ಗಳಿಸಿತ್ತು. 133 ರನ್‌ಗಳ ಸವಾಲು ಪಡೆದ ವೆಸ್ಟ್ ಇಂಡಿಸ್‌ 129 ರನ್‌ಗಳಿಗೆ ಆಲೌಟಾಗಿತ್ತು. ಪಾಕಿಸ್ತಾನ 3 ರನ್‌ಗಳ ರೋಚಕ ಜಯ ದಾಖಲಿಸಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News