ಧವನ್‌ಗೆ ಎಪ್ರಿಲ್ ಫೂಲ್ ಮಾಡಿದ ಯುವಿ!
ಹೊಸದಿಲ್ಲಿ, ಎ.1: ಐಪಿಎಲ್‌ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರರಾದ ಯುವರಾಜ್ ಸಿಂಗ್ ಸಹ ಆಟಗಾರ ಶಿಖರ್ ಧವನ್‌ರನ್ನು ಎಪ್ರಿಲ್ ತಿಂಗಳ ಮೊದಲ ದಿನವಾದ ಶನಿವಾರ ಮೂರ್ಖರನ್ನಾಗಿಸಲು ಯಶಸ್ವಿಯಾದರು.
ನಾನು ಧವನ್ ಬಳಿ ನಿಮ್ಮ ಪತ್ನಿ ಫೋನ್ ಕರೆ ಮಾಡಿದ್ದು, ಅದೊಂದು ತುರ್ತು ಕರೆಯಾಗಿದೆ ಎಂದು ಹೇಳಿದ್ದೆ. ನಾನು ಹೇಳಿದ್ದನ್ನು ನಿಜವೆಂದು ಭಾವಿಸಿದ ಅವರು ಪತ್ನಿಯ ಫೋನ್ ಸ್ವೀಕರಿಸಲು ಓಡಿದ್ದಾರೆ. ನಾನು ಧವನ್‌ಗೆ ಎಪ್ರಿಲ್ ಫೂಲ್ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುವಿ ವಿಡಿಯೋ ಸಹಿತ ಬಹಿರಂಗಪಡಿಸಿದ್ದಾರೆ.
‘‘ಯುವಿ ನನ್ನನ್ನು ಚೆನ್ನಾಗಿಯೇ ಫೂಲ್ ಮಾಡಿದ್ದಾರೆ. ಅವರ ಮಾತನ್ನು ನಿಜವೆಂದು ಭಾವಿಸಿದ್ದ ತಾನು ಪತ್ನಿಗೆ ತುರ್ತು ಕರೆ ಮಾಡಲು ಬ್ಯಾಗ್‌ನಲ್ಲಿ ಮೊಬೈಲ್ ಫೋನ್‌ಗಾಗಿ ಹುಡುಕಾಟ ನಡೆಸಿದ್ದೆ’’ ಎಂದು ಧವನ್ ಹೇಳಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ವರ್ಷದ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ. ಆರ್‌ಸಿಬಿಯ ಪ್ರಮುಖ ಆಟಗಾರರು ಗಾಯಾಳು ಸಮಸ್ಯೆಯನ್ನು ಎದುರಿಸುತ್ತಿದ್ದು ಇದು ಹೈದರಾಬಾದ್‌ಗೆ ನೆರವಾಗುವ ಸಾಧ್ಯತೆಯಿದೆ