×
Ad

3ನೆ ಟ್ವೆಂಟಿ-20: ಪಾಕಿಸ್ತಾನಕ್ಕೆ ಸೋಲುಣಿಸಿದ ವಿಂಡೀಸ್

Update: 2017-04-02 13:16 IST

ಪೋರ್ಟ್ ಆಫ್ ಸ್ಪೇನ್, ಎ.2: ಇವಿನ್ ಲೂಯಿಸ್ ಭರ್ಜರಿ ಅರ್ಧಶತಕದ (91 ರನ್, 51 ಎಸೆತ) ಬೆಂಬಲದಿಂದ ವೆಸ್ಟ್‌ಇಂಡೀಸ್ ತಂಡ ಪಾಕಿಸ್ತಾನ ವಿರುದ್ಧದ ಮೂರನೆ ಟ್ವೆಂಟಿ-20 ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ವಿಂಡೀಸ್ ಈ ಗೆಲುವಿನ ಮೂಲಕ ನಾಲ್ಕು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಪಾಕ್ ಮೊದಲೆರಡು ಪಂದ್ಯಗಳನ್ನು ಜಯಿಸಿದ್ದು, ಇನ್ನೊಂದು ಪಂದ್ಯ ಆಡಲು ಬಾಕಿಯಿದೆ.

ಇಲ್ಲಿ ಶನಿವಾರ ಇಲ್ಲಿ ನಡೆದ 3ನೆ ಪಂದ್ಯದಲ್ಲಿ 138 ರನ್ ಚೇಸಿಂಗ್ ಮಾಡಿದ ವಿಂಡೀಸ್ 14.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟದಲ್ಲಿ ಗೆಲುವಿನ ಗುರಿ ತಲುಪಿತು.

51 ಎಸೆತಗಳನ್ನು ಎದುರಿಸಿದ್ದ ಲೂಯಿಸ್ 9 ಸಿಕ್ಸರ್ ಹಾಗೂ ಐದು ಬೌಂಡರಿಗಳ ಸಹಿತ 91 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

  ಇದಕ್ಕೆ ಮೊದಲು ಟಾಸ್ ಜಯಿಸಿದ ಪಾಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ, ಪಂದ್ಯದ ಮೊದಲ ನಾಲ್ಕು ಎಸೆತಗಳಲ್ಲಿ ಅಹ್ಮದ್ ಶೆಹ್‌ಝಾದ್ ಹಾಗೂ ಇಮಾದ್ ವಾಸಿಮ್ ವಿಕೆಟ್‌ನ್ನು ಕಳೆದುಕೊಂಡಿತು. ಈ ಎರಡು ವಿಕೆಟ್‌ಗಳನ್ನು ಸ್ಯಾಮುಯೆಲ್ ಬದ್ರಿ ಕಬಳಿಸಿದರು.

ಪಾಕ್ 4 ರನ್‌ಗೆ 2 ವಿಕೆಟ್ ಕಳೆದುಕೊಂಡಾಗ 3ನೆ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿದ ಕಮ್ರಾನ್ ಅಕ್ಮಲ್(48) ಹಾಗೂ ಬಾಬರ್ ಆಝಂ(43) ತಂಡವನ್ನು ಆಧರಿಸಿದರು. 13ನೆ ಓವರ್‌ನ ಮೊದಲ ಎಸೆತದಲ್ಲಿ ಕಮ್ರಾನ್ ವಿಕೆಟ್ ಪಡೆದ ಸುನೀಲ್ ನರೇನ್ ಈ ಜೋಡಿಯನ್ನು ಬೇರ್ಪಡಿಸಿದರು.

ಕಮ್ರಾನ್ ಹಾಗೂ ಆಝಂ ಔಟಾದ ಬಳಿಕ ಮತ್ತೆ ಕುಸಿತದ ಹಾದಿ ಹಿಡಿದ ಪಾಕ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News