ಡೇವಿಸ್‌ಕಪ್: ಭಾಂಬ್ರಿಗೆ ಗಾಯದ ಸಮಸ್ಯೆ
Update: 2017-04-02 23:51 IST
ಹೊಸದಿಲ್ಲಿ, ಎ.2: ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಮುಂಬರುವ ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್‌ಕಪ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಈ ಬೆಳವಣಿಗೆಯು ಭಾರತದ ಡೇವಿಸ್‌ಕಪ್ ತಂಡಕ್ಕೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಭಾಂಬ್ರಿ ಪ್ರಸ್ತುತ ಮಂಡಿನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ.ರವಿವಾರ ಬೆಂಗಳೂರಿನಲ್ಲಿ ಆರಂಭವಾಗಿರುವ ಪೂರ್ವತಯಾರಿ ಶಿಬಿರದಲ್ಲಿ ಭಾಂಬ್ರಿ ಭಾಗವಹಿಸಿಲ್ಲ. ಭಾಂಬ್ರಿ ಅನುಪಸ್ಥಿತಿಯಲ್ಲಿ ಭಾರತಕ್ಕೆ ಡೆನಿಸ್ ಇಸ್ಟೊಮಿನ್ ನೇತೃತ್ವದ ಉಜ್ಬೇಕಿಸ್ತಾನದ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗಿದೆ. ಭಾರತದ ಸಿಂಗಲ್ಸ್ ಸವಾಲನ್ನು ರಾಮ್‌ಕುಮಾರ್ ರಾಮನಾಥನ್ ಎದುರಿಸಬೇಕಾಗಿದೆ. ಆದರೆ, ರಾಮ್‌ಕುಮಾರ್ ಇತ್ತೀಚೆಗಿನ ದಿನಗಳಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ.