ಮುಹಮ್ಮದ್ ಕೈಫ್‌ಗೆ ಹೆಣ್ಣು ಮಗು

Update: 2017-04-05 14:05 GMT

ಹೊಸದಿಲ್ಲಿ, ಎ.5: ಗುಜರಾತ್ ಲಯನ್ಸ್ ತಂಡದ ಸಹಾಯಕ ಕೋಚ್ ಮುಹಮ್ಮದ್ ಕೈಫ್ ಹಾಗೂ ಅವರ ಪತ್ನಿ ಪೂಜಾಗೆ ಹೆಣ್ಣು ಮಗು ಜನಿಸಿದ್ದು, ಬಲಗೈ ಬ್ಯಾಟ್ಸ್‌ಮನ್ ಕೈಫ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ತಿಳಿಸಿದ್ದಾರೆ.

 ‘‘ನನ್ನ ಸಂತೋಷಕ್ಕೆ ಪಾರವೇ ಇಲ್ಲ. ನನಗೆ ಶುಭ ಹಾರೈಸಿದ ಎಲ್ಲ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಟ್ವಿಟರ್‌ನಲ್ಲಿ ಕೈಫ್ ಟ್ವೀಟ್ ಮಾಡಿದ್ದಾರೆ.

 ಭಾರತದ ಮಾಜಿ ಆಟಗಾರರಾದ ಸಚಿನ್ ತೆಂಡುಲ್ಕರ್ ಹಾಗೂ ಅನಿಲ್ ಕುಂಬ್ಳೆ ಟ್ವಿಟರ್‌ನ ಮೂಲಕ ಕೈಫ್‌ಗೆ ಶುಭಾಶಯ ಕೋರಿದ್ದಾರೆ.

ಪೂಜಾ ಹಾಗೂ ನಿನಗೆ ಅಭಿನಂದನೆಗಳು. ನಿನಗೆ ಹಾಗೂ ನಿಮ್ಮ ಪುತ್ರಿಗೆ ಶುಭಾಶಯಗಳು’’ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

 ಸುಂದರ ಹೆಣ್ಣುಮಗುವಿನ ಜನ್ಮ ನೀಡಿರುವ ಕೈಫ್ ಹಾಗೂ ಪೂಜಾ ದಂಪತಿಗೆ ಅಭಿನಂದನೆಗಳು..ನಿಮಗೆ ಆರೋಗ್ಯಕರ ಹಾಗೂ ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುವೆ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News