ಆರ್‌ಸಿಬಿ ಗೆಲುವಿಗೆ ಕಠಿಣ ಸವಾಲು

Update: 2017-04-05 16:36 GMT

ಹೈದರಾಬಾದ್,ಎ.5: ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ಹೆನ್ರಿಕ್ಸ್ ಅರ್ಧಶತಕಗಳ ನೆರವಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು  ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 207ರನ್ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಹೈದರಾಬಾದ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ.

    23 ಎಸೆತಗಳಲ್ಲಿ ಐಪಿಎಲ್‌ನಲ್ಲಿ ಯುವರಾಜ್ ಸಿಂಗ್ ವೇಗದ ಅರ್ಧಶತಕ ದಾಖಲಿಸಿದರು. ಯುವರಾಜ್ 62 ರನ್ (27ಎ, 7ಬೌ,3ಸಿ) ಮತ್ತು ಹೆನ್ರಿಕ್ಸ್ 52 ರನ್(37ಎ, 3ಬೌ, 2 ಸಿ) ಗಳಿಸಿ ಔಟಾದರು. ನಾಯಕ ಡೇವಿಡ್ ವಾರ್ನರ್(14) ವಿಕೆಟ್‌ನ್ನು ಸನ್‌ರೈಸರ್ಸ್‌ ಬೇಗನೆ ಕಳೆದುಕೊಂಡರೂ, ಎರಡನೆ ವಿಕೆಟ್‌ಗೆ ಶಿಖರ್ ಧವನ್ ಮತ್ತು ಹೆನ್ರಿಕ್ಸ್ 74 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಧವನ್ 40 ರನ್ (31ಎ,5ಬೌ) ಗಳಿಸಿ ಔಟಾದರು. ದೀಪಕ್ ಹೂಡ ಔಟಾಗದೆ 16ರನ್ ಮತ್ತು ಬೆನ್ ಕಟ್ಟಿಂಗ್ 16 ರನ್ ಗಳಿಸಿದರು.

 ಆರ್‌ಸಿಬಿ ತಂಡದ ಅಂಕಿತ್ ಚೌಧರಿ, ಚಾಹಲ್ ಮತ್ತು ಸ್ಟುವರ್ಟ್ ಬಿನ್ನಿ, ಟೈಮಲ್ ಮಿಲ್ಸ್ ತಲಾ ಒಂದು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News