ವಿಸ್ಡನ್ ವಿಶ್ವದ ಮುಂಚೂಣಿ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿ ಆಯ್ಕೆ

Update: 2017-04-05 17:53 GMT

 ಹೊಸದಿಲ್ಲಿ, ಎ.5: ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ 2016ನೆ ಸಾಲಿನ ವಿಸ್ಡನ್ ವಿಶ್ವದ ಮುಂಚೂಣಿ ಕ್ರಿಕೆಟಿಗನಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಕೊಹ್ಲಿಯ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

ಕೊಹ್ಲಿ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 75.93ರ ಸರಾಸರಿಯಲ್ಲಿ 1,251 ರನ್ ಕಲೆ ಹಾಕಿ ಭರ್ಜರಿ ಪ್ರದರ್ಶನ ನೀಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 92.37ರ ಸರಾಸರಿಯಲ್ಲಿ 739 ರನ್ ಗಳಿಸಿದ್ದರು. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 106.83ರ ಸರಾಸರಿಯಲ್ಲಿ ಒಟ್ಟು 641 ರನ್ ಕಲೆ ಹಾಕಿದ್ದರು.

ಕ್ಯಾಲೆಂಡರ್ ವರ್ಷವೊಂದರಲ್ಲಿ ಕೇವಲ ಆರು ಬ್ಯಾಟ್ಸ್‌ಮನ್‌ಗಳು ಗರಿಷ್ಠ ಅಂತಾರಾಷ್ಟ್ರೀಯ ಸ್ಕೋರ್ ಗಳಿಸಿದ್ದಾರೆ. ಆದರೆ, ಭಾರತದ ನಾಯಕ ಕೊಹ್ಲಿಯಷ್ಟು ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿಲ್ಲ.

 2016ರ ವಿಶ್ವದ ಮುಂಚೂಣಿ ಕ್ರಿಕೆಟಿಗನಾಗಿರುವ ಕೊಹ್ಲಿಯ ಚಿತ್ರ 2017ರ ಆವೃತ್ತಿಯ ‘ವಿಸ್ಡನ್ ಕ್ರಿಕೆಟರ್ಸ್‌ ಅಲ್‌ಮಾನಕ್’ ಮುಖಪುಟದಲ್ಲಿ ಪ್ರಟವಾಗಿದೆ. 2003ರಲ್ಲಿ ರಿಕಿ ಪಾಂಟಿಂಗ್ ಮೊದಲ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದರು ಎಂದು ವಿಸ್ಡನ್ ಘೋಷಿಸಿದೆ.

ಕಳೆದ ವರ್ಷ ಬ್ಯಾಟ್‌ನಲ್ಲಿ ರನ್ ಹೊಳೆ ಹರಿಸಿರುವ ಕೊಹ್ಲಿ ಪ್ರತಿಷ್ಠಿತ ‘ಪಾಲಿ ಉಮ್ರಿಗಾರ್ ಪ್ರಶಸ್ತಿ’ ಹಾಗೂ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News