×
Ad

ಟಾಪ್ ಯೋಜನೆಯಿಂದ ತನ್ನನ್ನು ಕೈಬಿಟ್ಟಿದ್ದು ಸರಿಯಾದ ನಿರ್ಧಾರ: ಸುಶೀಲ್‌ಕುಮಾರ್

Update: 2017-04-13 22:43 IST

 ಹೊಸದಿಲ್ಲಿ, ಎ.13: ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಜಯಿಸಿದ್ದ ಭಾರತದ ಏಕೈಕ ಕ್ರೀಡಾಪಟು ಆಗಿರುವ ಸುಶೀಲ್ ಕುಮಾರ್ ತನ್ನನ್ನು ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ(ಟಾಪ್)ನಿಂದ ಕೈಬಿಟ್ಟಿರುವುದನ್ನು ಸ್ವಾಗತಿಸಿದ್ದಾರೆ. ಕುಸ್ತಿಯಿಂದ ದೂರ ಉಳಿದಿರುವ ತನಗೆ ಸರಕಾರದ ಸಹಾಯಧನ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

‘‘ನನ್ನ ಪ್ರಕಾರ ಇದು ಸರಿಯಾದ ನಿರ್ಧಾರ. ನಾನು ಕುಸ್ತಿಯಲ್ಲಿ ಸಕ್ರಿಯವಾಗಿಲ್ಲದ ಸಮಯದಲ್ಲೇ ನನ್ನ ಹೆಸರನ್ನು ಯೋಜನೆಯಿಂದ ಕೈಬಿಡಬೇಕಾಗಿತ್ತು. ನನಗೆ ಕುಸ್ತಿಯ ಮೂಲಕ ಕೊಡುಗೆ ನೀಡಲು ಸಾಧ್ಯವಾಗದೇ ಇದ್ದಾಗ ಸರಕಾರದ ಯಾವುದೇ ಧನ ಸಹಾಯ ಪಡೆಯುವುದು ಸರಿಯಲ್ಲ’’ ಎಂದು ಸುಶೀಲ್ ಅಭಿಪ್ರಾಯಪಟ್ಟರು.

ಸುಶೀಲ್‌ಕುಮಾರ್‌ರಲ್ಲದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಯೋಗೇಶ್ವರ ದತ್ತ, ಫೋಗತ್ ಸಹೋದರಿಯರಾದ ಗೀತಾ ಹಾಗೂ ಬಬಿತಾ ಕೂಡ ಪಟ್ಟಿಯಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News