×
Ad

ಕಿಂಗ್ಸ್ ವಿರುದ್ಧ ಕೆಕೆಆರ್‌ಗೆ ಜಯ

Update: 2017-04-13 23:44 IST

 ಕೋಲ್ಕತಾ, ಎ.13:ಕೋಲ್ಕತಾ ನೈಟ್ ರೈಡರ್ಸ್‌ ಐಪಿಎಲ್ ಟ್ವೆಂಟಿ-20 ಟೂರ್ನಿಯ 11ನೆ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 171 ರನ್‌ಗಳ ಸವಾಲನ್ನು ಪಡೆದ ಕೋಲ್ಕತಾ ನೈಟ್ ರೈಡರ್ಸ್‌ ತಂಡ 16.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತು.
ನಾಯಕ ಗೌತಮ್ ಗಂಭೀರ್ ಔಟಾಗದೆ 72 ರನ್(49ಎ, 11ಬೌ)ಗಳಿಸಿದರು.
ಇನಿಂಗ್ಸ್ ಆರಂಭಿಸಿದ ಸುನೀಲ್ ನರೇನ್ ಮತ್ತು ಗಂಭೀರ್ ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 76 ರನ್ ಗಳಿಸಿದರು.
ನರೇನ್ 37 ರನ್(18ಎ, 4ಬೌ,3ಸಿ) , ರಾಬೀನ್ ಉತ್ತಪ್ಪ 26ರನ್, ಮನೀಷ್ ಪಾಂಡೆ ಔಟಾಗದೆ 25ರನ್ ಗಳಿಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ 170/9
ಕಿಂಗ್ಸ್‌ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 170ರನ್ ಗಳಿಸಿತ್ತು
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್‌ಇಲೆವೆನ್ ಪಂಜಾಬ್ ತಂಡ ಹಾಶಿಂ ಅಮ್ಲ 25 ರನ್, ಮನನ್ ವೋರಾ 28ರನ್, ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ 25 ರನ್, ಡೇವಿಡ್ ಮಿಲ್ಲರ್ 28 ರನ್, ವೃದ್ಧಿಮಾನ್ ಸಹಾ 25ರನ್, ಮೋಹಿತ್ ಶರ್ಮ 10 ರನ್, ಸ್ಟೋನಿಸ್ 8ರನ್ , ವರುಣ್ ಆ್ಯರೊನ್ 4ರನ್ ಗಳಿಸಿದರು.
ಕೋಲ್ಕತಾ ತಂಡದ ಉಮೇಶ್ ಯಾದವ್ 33ಕ್ಕೆ 4, ವೋಕ್ಸ್ 30ಕ್ಕೆ 2, ನರೇನ್, ಚಾವ್ಲಾ ಮತ್ತು ಗ್ರಾಂಡ್‌ಹೋಮೆ ತಲಾ 1 ವಿಕೆಟ್ ಪಡೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News