ಸಿಂಗಾಪುರ ಸೂಪರ್ ಸರಣಿ: ಸಾಯಿ ಪ್ರಣೀತ್ ಫೈನಲ್‌ಗೆ
Update: 2017-04-15 15:40 IST
ಕೌಲಾಲಂಪುರ, ಎ.15: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್ ಸಿಂಗಾಪುರ ಓಪನ್ ಸೂಪರ್ ಸರಣಿಯಲ್ಲಿ ಮೊತ್ತಮೊದಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿ ಫೈನಲ್‌ನಲ್ಲಿ ಪ್ರಣೀತ್ ಅವರು ಕೊರಿಯದ ಲೀ ಡಾಂಗ್ ಕಿಯೂನ್‌ರನ್ನು 21-6, 21-8 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.
ಮತ್ತೊಂದು ಪುರುಷರ ಸಿಂಗಲ್ಸ್‌ನ ಎರಡನೆ ಸೆಮಿ ಫೈನಲ್‌ನಲ್ಲಿ ಕೆ.ಶ್ರೀಕಾಂತ್ ಅವರು ಇಂಡೋನೇಷ್ಯದ ಆ್ಯಂಥೊನಿ ಸಿನಿಸುಕಾ ಜಿಂಟಿಂಗ್‌ರನ್ನು ಎದುರಿಸಲಿದ್ದಾರೆ.