×
Ad

ಭಾರತೀಯ ಫುಟ್ಬಾಲ್‌ಗೆ ಕವಿದ ಕತ್ತಲು !

Update: 2017-04-15 21:58 IST

 ಲೂಧಿಯಾನ, ಎ.15: ಲೂಧಿಯಾನದ ಗುರುನಾನಕ್ ಸ್ಟೇಡಿಯಂನಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಕೈಕೊಟ್ಟ ಕಾರಣದಿಂದಾಗಿ ಐ ಲೀಗ್ ಫ್ಬುಟಾಲ್ ಪಂದ್ಯ 10 ನಿಮಿಷಗಳ ಕಾಲ ಸ್ಥಗಿತಗೊಂಡಿತು.
  ಸ್ಟೇಡಿಯಂನಲ್ಲಿರುವ ಒಂದು ಕಂಬದ ಫ್ಲೆಡ್ ಲೈಟ್ ಬೆಳಗಲಿಲ್ಲ. ಈ ಕಾರಣದಿಂದಾಗಿ ಮಿನೆರ್ವ ಪಂಜಾಬ್ ಮತ್ತು ಮೋಹನ್ ಬಗಾನ್ ಪಂದ್ಯ ಆರಂಭಕ್ಕೆ ಅಡಚಣೆ ಉಂಟಾಯಿತು. ಕ್ರೀಡಾಂಗಣ ಕತ್ತಲಲ್ಲಿ ಮುಳುಗಿತು.
ಕ್ರೀಡಾಂಗಣದ ಹೊನಲು ಬೆಳಕಿನ ವ್ಯವಸ್ಥೆ ಸರಿಯಾಗಿ ಆಟ ಆರಂಭಗೊಂಡು 50 ನಿಮಿಷ ಕಳೆಯುವಷ್ಟರಲ್ಲಿ ಮತ್ತೆ ಫ್ಲೆಡ್ ವ್ಯವಸ್ಥೆ ಕೈಕೊಟ್ಟಿತು. 20 ನಿಮಿಷಗಳ ಬಳಿಕ ಕ್ರೀಡಾಂಗಣದಲ್ಲಿ ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಲಾಯಿತು. ಮತ್ತೆ ಆಟ ಆರಂಭಗೊಂಡಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News