ಬ್ಯಾಡ್ಮಿಂಟನ್ ರ್ಯಾಂಕಿಂಗ್: ಮೂರನೆ ಸ್ಥಾನಕ್ಕೇರಿದ ಸಿಂಧು

Update: 2017-04-20 17:32 GMT

ಹೊಸದಿಲ್ಲಿ, ಎ.20: ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಗುರುವಾರ ಬಿಡುಗಡೆಯಾಗಿರುವ ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ 2 ಸ್ಥಾನ ಭಡ್ತಿ ಪಡೆದು ಮೂರನೆ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಕಳೆದ ವಾರ 5ನೆ ಸ್ಥಾನಕ್ಕೆ ಕುಸಿದಿದ್ದ ಸಿಂಧು ಇತ್ತೀಚೆಗೆ ಕೊನೆಗೊಂಡ ಸಿಂಗಾಪುರ ಓಪನ್ ಸೂಪರ್ ಸರಣಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ ಹಿನ್ನೆಲೆಯಲ್ಲಿ ಎರಡು ಸ್ಥಾನ ಮೇಲಕ್ಕೇರಿದ್ದಾರೆ.

21ರ ಹರೆಯದ ಸಿಂಧು ಎರಡು ವಾರಗಳ ಹಿಂದೆಯಷ್ಟೇ ಜೀವನಶ್ರೇಷ್ಠ ದ್ವಿತೀಯ ಸ್ಥಾನಕ್ಕೇರಿದ್ದರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 8ನೆ ಸ್ಥಾನಕ್ಕೆ ಜಿಗಿದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಸಿಂಗಾಪುರ ಓಪನ್‌ನಲ್ಲಿ ರನ್ನರ್-ಅಪ್ ಪ್ರಶಸ್ತಿ ಪಡೆದಿದ್ದ ಕೆ.ಶ್ರೀಕಾಂತ್ ಹಾಗೂ ಚಾಂಪಿಯನ್ ಬಿ. ಸಾಯಿ ಪ್ರಣೀತ್ 8 ಸ್ಥಾನ ಭಡ್ತಿ ಪಡೆದು ಕ್ರಮವಾಗಿ 21ನೆ ಹಾಗೂ 22ನೆ ಸ್ಥಾನಕ್ಕೆ ಏರಿದ್ದಾರೆ.

ಅಜಯ್ ಜಯರಾಮ್ 13ನೆ ಸ್ಥಾನದಲ್ಲಿ ಮುಂದುವರಿಯುವ ಮೂಲಕ ಗರಿಷ್ಠ ರ್ಯಾಂಕಿನಲ್ಲಿರುವ ಭಾರತೀಯ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News