ಐಸಿಸಿ ಚಾಂಪಿಯನ್ಸ್ ಟ್ರೋಫಿ: ಬಾಂಗ್ಲಾದೇಶ,ಆಸ್ಟ್ರೇಲಿಯ ತಂಡ ಪ್ರಕಟ

Update: 2017-04-20 18:10 GMT

ಢಾಕಾ,ಎ.20: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ 15 ಸದಸ್ಯರನ್ನು ಒಳಗೊಂಡ ತಂಡವನ್ನು ಗುರುವಾರ ಪ್ರಕಟಿಸಿದ್ದು, ಶಫಿವುಲ್ ಇಸ್ಲಾಮ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಇಸ್ಲಾಮ್ 2016ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಕೊನೆಯ ಬಾರಿ ಏಕದಿನ ಪಂದ್ಯವನ್ನು ಆಡಿದ್ದರು. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಇಸ್ಲಾಮ್ ಯಾವುದೇ ಪಂದ್ಯಗಳಿಗೆ ಲಭ್ಯವಿರಲಿಲ್ಲ.

ಕಳೆದ ತಿಂಗಳು ಶ್ರೀಲಂಕಾ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲಿ ಆಡಿದ ನೂರುಲ್ ಹಸನ್, ಶುವಗತ ಹೊಮ್ ಹಾಗೂ ಸುಭಾಶಿಸ್ ರಾಯ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಚಾಂಪಿಯನ್ಸ್ ಟ್ರೋಫಿಗೆ ಬಾಂಗ್ಲಾದೇಶ ತಂಡ:

ಮಶ್ರಾಫೆ ಮೊರ್ತಝಾ(ನಾಯಕ), ಮುಶ್ಫಿಕುರ್ರಹೀಂ(ವಿಕೆಟ್‌ಕೀಪರ್), ಶಾಕಿಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಮುಸ್ತಫಿಝರ್ರಹ್ಮಾನ್, ಸೌಮ್ಯ ಸರ್ಕಾರ್, ಕಮ್ರುಲ್ ಕಯೆಸ್,ಶಬ್ಬೀರ್ರಹ್ಮಾನ್, ಮಹ್ಮೂದುಲ್ಲಾ,ಮೊಸಾಡೆಕ್ ಹುಸೈನ್, ರುಬೆಲ್ ಹುಸೈನ್, ತಸ್ಕಿನ್ ಅಹ್ಮದ್, ಸುಂಝಮುಲ್ ಇಸ್ಲಾಮ್ , ಮೆಹೆದಿ ಹಸನ್, ಶಫಿವುಲ್ ಇಸ್ಲಾಮ್.

ಆಸ್ಟ್ರೇಲಿಯ ತಂಡಕ್ಕೆ ಸ್ಟಾರ್ಕ್, ಪ್ಯಾಟಿನ್ಸನ್

 ಮೆಲ್ಬೋರ್ನ್, ಎ.20: ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರನ್ನು ಒಳಗೊಂಡ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್,ಪ್ಯಾಟ್ ಕಮಿನ್ಸ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ತಂಡಕ್ಕೆ ವಾಪಸಾಗಿದ್ದಾರೆ.

 ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಸ್ಟಾರ್ಕ್ ಹಾಗೂ ಕೆಕೆಆರ್‌ನ ವೇಗದ ಬೌಲರ್ ಕ್ರಿಸ್ ಲಿನ್ ಜೂನ್‌ನಲ್ಲಿ ನಡೆಯಲಿರುವ ಟೂರ್ನಿಗೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದರು. ವೇಗಿಗಳಾದ ಜಾನ್ ಹೇಸ್ಟಿಂಗ್ಸ್ ಹಾಗೂ ಜೋಶ್ ಹೇಝಲ್‌ವುಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2015ರ ವಿಶ್ವಕಪ್‌ನ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಆಲ್‌ರೌಂಡರ್ ಜೇಮ್ಸ್ ಫಾಕ್ನರ್‌ರನ್ನು ತಂಡದಿಂದ ಕೈಬಿಡಲಾಗಿದೆ. ಇದೇ ವೇಳೆ, ಮಾರ್ಕಸ್ ಸ್ಟೋನಿಸ್ ಹಾಗೂ ಮೊಸೆಸ್ ಹೆನ್ರಿಕ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯ ಏಕದಿನ ತಂಡ: ಸ್ಟೀವನ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಆ್ಯರೊನ್ ಫಿಂಚ್, ಜಾನ್ ಹೇಸ್ಟಿಂಗ್ಸ್, ಜೋಶ್ ಹೇಝಲ್‌ವುಡ್, ಟ್ರೆವಿಸ್ ಹೆಡ್, ಮೊಸೆಸ್ ಹೆನ್ರಿಕ್ಸ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೇಮ್ಸ್ ಪ್ಯಾಟಿನ್ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್, ಆಡಮ್ ಝಾಂಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News