ಇಂಗ್ಲೆಂಡ್‌ನ ಮಾಜಿ ಡಿಫೆಂಡರ್ ಎಹಿಯೊಗು ನಿಧನ

Update: 2017-04-21 18:02 GMT

ಲಂಡನ್, ಎ.21: ಇಂಗ್ಲೆಂಡ್ ಹಾಗೂ ಆಸ್ಟನ್ ವಿಲ್ಲಾದ ಮಾಜಿ ಡಿಫೆಂಡರ್ ಯುಗೊ ಎಹಿಯೊಗು(44 ವರ್ಷ)ಹೃದಯಾಘಾತದಿಂದ ನಿಧನರಾಗಿದ್ದಾರೆ.

ಟೋಟನ್‌ಹ್ಯಾಮ್ ಅಂಡರ್-23 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಹಿಯೊಗು ಗುರುವಾರ ಕ್ಲಬ್‌ನ ತರಬೇತಿ ಮೈದಾನದಲ್ಲಿ ಕುಸಿದು ಬಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಯುಗೊಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ, ಅವರು ಶುಕ್ರವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ ಎಂದು ಇಂಗ್ಲಿಷ್ ಪ್ರೀಮಿಯರ್ ಲೀಗ್ ಕ್ಲಬ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಯುಗೊ ವೃತ್ತಿಜೀವನದ ಹೆಚ್ಚಿನ ಸಮಯವನ್ನು ಆಸ್ಟನ್ ವಿಲ್ಲಾ ಕ್ಲಬ್‌ನಲ್ಲಿ ಕಳೆದಿದ್ದರು. ಇದೇ ಕ್ಲಬ್‌ನ ಪರ 1996ರಲ್ಲಿ ಲೀಗ್ ಕಪ್‌ನ್ನು ಜಯಿಸಿದ್ದರು. ಯುಗೊ ಇಂಗ್ಲೆಂಡ್‌ನ ಪರ ನಾಲ್ಕು ಪಂದ್ಯಗಳನ್ನು ಹಾಗೂ ವಿಲ್ಲಾ ಕ್ಲಬ್‌ನ ಪರ 300ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದರು. ಲಂಡನ್‌ನ ಯುಗೊ 2014ರಲ್ಲಿ ಟೋಟನ್‌ಹ್ಯಾಮ್ ಕ್ಲಬ್‌ನ ಕೋಚ್ ಆಗಿ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News