ಡೆಲ್ಲಿ ಡೆವಿಲ್ಸ್‌ಗೆ ಬೆದರಿಸಲು ಮುಂಬೈ ತಯಾರಿ

Update: 2017-04-21 18:09 GMT

ಹೊಸದಿಲ್ಲಿ, ಎ.21: ಸತತ ಐದು ಪಂದ್ಯಗಳಲ್ಲಿ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡ ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸಲಿದೆ.

ಡೆಲ್ಲಿ ತಂಡದಲ್ಲಿ ದಕ್ಷಿಣ ಆಫ್ರಿಕದ ಕ್ವಿಂಟನ್ ಡಿಕಾಕ್ ಹಾಗೂ ಜೆಪಿ ಡುಮಿನಿ ಅನುಪಸ್ಥಿತಿ ಕಾಡುತ್ತಿದ್ದರೂ 5 ಪಂದ್ಯಗಳಲ್ಲಿ 2 ಜಯ ಸಾಧಿಸಿ ನಾಲ್ಕು ಅಂಕ ಗಳಿಸಿದೆ. ಎರಡೂ ಪಂದ್ಯವನ್ನು 97 ಹಾಗೂ 51 ರನ್ ಅಂತರದಿಂದ ಜಯಿಸಿದೆ.2 ಬಾರಿ 15 ರನ್‌ಗಳಿಂದ ಹಾಗೂ ಒಂದು ಬಾರಿ 4 ವಿಕೆಟ್‌ಗಳಿಂದ ಸೋತಿದೆ.

ಮತ್ತೊಂದೆಡೆ ಮುಂಬೈ ತಂಡ 5 ಪಂದ್ಯಗಳನ್ನು ಜಯಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಪಂಜಾಬ್ ವಿರುದ್ಧ ಶುಕ್ರವಾರ ಇಂದೋರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಗೆಲುವಿಗೆ 199 ರನ್ ಗುರಿ ಪಡೆದಿದ್ದ ಮುಂಬೈ 15.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತ್ತು. ಜೋಸ್ ಬಟ್ಲರ್ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

ಮುಂಬೈ ತಂಡ ಬ್ಯಾಟಿಂಗ್ ಬಲದಿಂದಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕೀರನ್ ಪೊಲಾರ್ಡ್ ಮಧ್ಯಮ ಕ್ರಮಾಂಕದಲ್ಲೂ, ಪಾಂಡ್ಯ ಸಹೋದರರಾದ ಕ್ರುನಾಲ್ ಹಾಗೂ ಹಾರ್ದಿಕ್ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಬೌಲಿಂಗ್‌ನಲ್ಲಿ ಲಸಿತ್ ಮಾಲಿಂಗ 4 ಪಂದ್ಯಗಳಲ್ಲಿ ಕೇವಲ 4 ವಿಕೆಟ್ ಪಡೆದು ನಿರಾಸೆ ಮೂಡಿಸಿದ್ದಾರೆ.

ಡೆಲ್ಲಿ ತಂಡದಲ್ಲಿ ಕೋರಿ ಆ್ಯಂಡರ್ಸನ್ ಫಿಟ್‌ನೆಸ್ ಪಡೆದರೆ, ಆ್ಯಂಜೆಲೊ ಮ್ಯಾಥ್ಯೂಸ್ ಸ್ಥಾನ ಕಳೆದುಕೊಳ್ಳಲಿದ್ದಾರೆ. ಸ್ಪಿನ್ನರ್ ಶಹದಾಬ್ ನದೀಮ್ ತಂಡಕ್ಕೆ ವಾಪಸಾಗುವ ಸಾಧ್ಯತೆಯಿದೆ.

ಅಂಕಿ-ಅಂಶ:

-ಈ ಋತುವಿನಲ್ಲಿ ಮುಂಬೈನ ಮೂವರು ಬ್ಯಾಟ್ಸ್‌ಮನ್‌ಗಳಾದ ರಾಣಾ, ಬಟ್ಲರ್ ಹಾಗೂ ಪೊಲಾರ್ಡ್ 150ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಡೆಲ್ಲಿ ಪರ ಸಂಜು ಸ್ಯಾಮ್ಸನ್(215) ಮಾತ್ರ ಈ ಸಾಧನೆ ಮಾಡಿದ್ದಾರೆ.

-ಡೆಲ್ಲಿಯ ವೇಗದ ಬೌಲರ್ ಕ್ರಿಸ್ ಮೊರಿಸ್ 5 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದು, ಭುವನೇಶ್ವರ್ ಕುಮಾರ್ ಬಳಿಕ ಎರಡನೆ ಗರಿಷ್ಠ ವಿಕೆಟ್ ಪಡೆದಿದ್ದಾರೆ.

ಹೆಡ್-ಟು-ಹೆಡ್: 9-9

ಇಂದಿನ ಪಂದ್ಯಗಳು

ಪುಣೆ-ಹೈದರಾಬಾದ್

ಸ್ಥಳ: ಪುಣೆ, ಸಮಯ: ಸಂಜೆ 4:00

ಮುಂಬೈ-ಡೆಲ್ಲಿ

ಸ್ಥಳ: ದಿಲ್ಲಿ, ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News