ಬಾಂಗ್ಲಾದೇಶದ ಟ್ವೆಂಟಿ-20 ನಾಯಕನಾಗಿ ಶಾಕಿಬ್ ಆಯ್ಕೆ

Update: 2017-04-22 17:32 GMT

ಢಾಕಾ, ಎ.22: ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಬಾಂಗ್ಲಾದೇಶದ ನೂತನ ಟ್ವೆಂಟಿ-20 ನಾಯಕನಾಗಿ ಆಯ್ಕೆಯಾಗಿದ್ದಾರೆ.

ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯ ವೇಳೆ ಮಶ್ರಾಫೆ ಮೊರ್ತಝಾ ಟ್ವೆಂಟಿ-20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಾಂಗ್ಲಾದ ಟ್ವೆಂಟಿ-20 ನಾಯಕನ ಸ್ಥಾನ ತೆರವಾಗಿತ್ತು.

ಶಾಕಿಬ್ ಈ ಹಿಂದೆ 2009 ಹಾಗೂ 2010ರ ನಡುವೆ ನಾಲ್ಕು ಟ್ವೆಂಟಿ-20 ಪಂದ್ಯಗಳಲ್ಲಿ ನಾಯಕತ್ವವಹಿಸಿಕೊಂಡಿದ್ದು, ಬಾಂಗ್ಲಾದೇಶ ಎಲ್ಲ 4 ಪಂದ್ಯಗಳನ್ನು ಸೋತಿತ್ತು.

ಈ ವರ್ಷ ಮೊದಲ ಸಭೆ ನಡೆಸಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಹಲವು ಸುತ್ತಿನ ಚರ್ಚೆಯ ಬಳಿಕ ಶಾಕಿಬ್‌ರನ್ನು ನಾಯಕನಾಗಿ ನೇಮಿಸಿದೆ.

‘‘ನಾವು ಇತರ ಹೆಸರಗಳನ್ನು ಪರಿಗಣಿಸಿದ್ದೆವು. ಶಾಕಿಬ್‌ರ ಫಾರ್ಮ್ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅವರ ಸಾಮರ್ಥ್ಯ ಅಪೂರ್ವವಾದುದು. ಈ ಹಿನ್ನೆಲೆಯಲ್ಲಿ ಅವರನ್ನು ನಾಯನಾಗಿ ಆಯ್ಕೆ ಮಾಡಲಾಗಿದೆ’’ ಎಂದು ಬಿಸಿಬಿ ಅಧ್ಯಕ್ಷ ನಝ್ಮುಲ್ ಹಸನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News