ಅಮೆರಿಕದಲ್ಲಿ ಹಿಜಾಬ್ ಧರಿಸಿ ಬಾಕ್ಸಿಂಗ್ ಆಡಲು ಅನುಮತಿ

Update: 2017-04-23 15:26 GMT

 ವಾಶಿಂಗ್ಟನ್, ಎ. 23: ಅಮೆರಿಕದಲ್ಲಿ ನಡೆಯುವ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಹಿಜಾಬ್ ಧರಿಸಿ ಹಾಗೂ ಕೈಗಳು ಮತ್ತು ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಧರಿಸಿ ಪಾಲ್ಗೊಳ್ಳುವ ಹಕ್ಕನ್ನು 16 ವರ್ಷದ ಮುಸ್ಲಿಮ್-ಅಮೆರಿಕನ್ ಮಹಿಳಾ ಬಾಕ್ಸರ್ ಗೆದ್ದುಕೊಂಡಿದ್ದಾರೆ.

ಮಿನಸೋಟ ರಾಜ್ಯದ ಓಕ್‌ಡೇಲ್ ನಿವಾಸಿ ಅಮಯ್ಯ ಝಾಫರ್ 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಇಚ್ಛೆಯನ್ನು ಹೊಂದಿದ್ದಾರೆ.

ತನ್ನ ಧಾರ್ಮಿಕ ನಂಬಿಕೆಗಳನ್ನು ಉಳಿಸಿಕೊಂಡೇ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಅಮಯ್ಯ ಅವರಿಗೆ ಅಮೆರಿಕ ಬಾಕ್ಸಿಂಗ್ ಸಂಸ್ಥೆ ನೀಡಿದೆ ಎಂದು ‘ದ ಸ್ಟಾರ್ ಟ್ರಿಬ್ಯೂನ್’ ವರದಿ ಮಾಡಿದೆ.

ಆದರೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕಾಗಿ ಇದೇ ರೀತಿಯ ವಿನಾಯಿತಿ ಪಡೆಯಲು ಆಕೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ಮನವೊಲಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News