ಭಾರತಕ್ಕೆ ಸಿಂಧು ಸಾರಥ್ಯ

Update: 2017-04-24 17:32 GMT

ವುಹಾನ್(ಚೀನಾ), ಎ.24: ಕಳೆದ ಆವೃತ್ತಿಯ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಮಂಗಳವಾರದಿಂದ ಆರಂಭವಾಗಲಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ.

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು ಈ ವರ್ಷದ ಜನವರಿಯಲ್ಲಿ ನಡೆದಿದ್ದ ಸೈಯದ್ ಮೋದಿ ಜಿಪಿ ಗೋಲ್ಡ್ ಟೂರ್ನಿ ಹಾಗೂ ಈ ತಿಂಗಳಾರಂಭದಲ್ಲಿ ನಡೆದಿದ್ದ ಇಂಡಿಯಾ ಸೂಪರ್ ಸರಣಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ನಾಲ್ಕನೆ ಶ್ರೇಯಾಂಕಿತೆ ಸಿಂಧು ಇತ್ತೀಚೆಗೆ ನಡೆದ ಸಿಂಗಾಪುರ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು. ಆದರೆ, ಒಲಿಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್‌ಗೆ ಶರಣಾಗಿದ್ದರು. ಸಿಂಧು ಈವಾರ ಮತ್ತೊಂದು ಉತ್ತಮ ಪ್ರದರ್ಶನ ನೀಡುವತ್ತ ಚಿತ್ತವಿರಿಸಿದ್ದಾರೆ.

21ರ ಹರೆಯದ ಸಿಂಧು ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯದ ದಿನಾರ್ ಅಯುಸ್ಟೈನ್‌ರನ್ನು ಎದುರಿಸಲಿದ್ದಾರೆ. ಸಿಂಗಾಪುರ ಓಪನ್‌ನಿಂದ ಹಿಂದೆ ಸರಿದಿದ್ದ ಸೈನಾ ನೆಹ್ವಾಲ್ ಜಪಾನ್‌ನ ಸಯಾಕಾ ಸಾಟೊರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News