ಬಾರ್ಸಿಲೋನ ಪರ 500ನೆ ಗೋಲು ಬಾರಿಸಿದ ಮೆಸ್ಸಿ

Update: 2017-04-24 17:36 GMT

 ಮ್ಯಾಡ್ರಿಡ್, ಎ.24: ರಿಯಲ್ ಮ್ಯಾಡ್ರಿಡ್ ವಿರುದ್ಧ ಅವಳಿ ಗೋಲು ಬಾರಿಸಿದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಬಾರ್ಸಿಲೋನ ಕ್ಲಬ್‌ನ ಪರ 500ನೆ ಗೋಲು ಬಾರಿಸಿದರು.

ರವಿವಾರ ಇಲ್ಲಿ ನಡೆದ ಸ್ಪಾನೀಶ್ ಲಾಲಿಗ ಪಂದ್ಯದಲ್ಲಿ 29ರ ಹರೆಯದ ಮೆಸ್ಸಿ ಮ್ಯಾಡ್ರಿಡ್ ತಂಡದ ವಿರುದ್ಧ 29ನೆ ಗೋಲು ಬಾರಿಸಿ ಗಮನ ಸೆಳೆದರು. ಮೆಸ್ಸಿ 33ನೆ ಹಾಗೂ 90+2 ನಿಮಿಷದಲ್ಲಿ ಗೋಲು ಬಾರಿಸಿ ಬಾರ್ಸಿಲೋನಕ್ಕೆ 3-2 ಅಂತರದ ರೋಚಕ ಗೆಲುವು ತಂದರು. ರಾಕಿಟಕ್(73ನೆ ನಿಮಿಷ) ಒಂದು ಗೋಲು ಬಾರಿಸಿದರು. ಮ್ಯಾಡ್ರಿಡ್‌ನ ಪರ ಕ್ಯಾಸೆಮಿರೊ(28ನೆ ನಿಮಿಷ) ಹಾಗೂ ರಾಮೊಸ್(77ನೆ ನಿ.) ತಲಾ ಒಂದು ಗೋಲು ಬಾರಿಸಿದರು.

ಕ್ರಿಸ್ಟಿಯಾನೊ ರೊನಾಲ್ಡೊ ಈ ವರ್ಷಾರಂಭದಲ್ಲಿ 500ನೆ ಕ್ಲಬ್ ಗೋಲು ಬಾರಿಸಿದರು. ಮೆಸ್ಸಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಮೈಲುಗಲ್ಲು ತಲುಪಿದರು. ರೊನಾಲ್ಡೊ 31 ವರ್ಷ, 313 ದಿನಗಳಲ್ಲಿ ಈ ಸಾಧನೆ ಮಾಡಿದರೆ, ಮೆಸ್ಸಿ 29 ವರ್ಷ, 304 ದಿನಗಳಲ್ಲಿ ಈ ಮೈಲುಗಲ್ಲು ತಲುಪಿದರು. ಮೆಸ್ಸಿ ಬಾರ್ಸಿಲೋನ ಕ್ಲಬ್‌ನ ಪರ ಲಾಲಿಗದಲ್ಲಿ 343, ಚಾಂಪಿಯನ್ಸ್ ಲೀಗ್‌ನಲ್ಲಿ 94, ಕೋಪಾ ಡೆಲ್ ರೆ 43, ಸ್ಪಾನಿಶ್ ಸೂಪರ್ ಲೀಗ್ 12, ಕ್ಲಬ್ ವಿಶ್ವಕಪ್ 5 ಹಾಗೂ ಸೂಪರ್‌ಕಪ್‌ನಲ್ಲಿ 3 ಗೋಲುಗಳನ್ನು ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News