×
Ad

ಫುಟ್ಬಾಲ್ ಆಟಗಾರ ಅನ್ವರ್ ಅಲಿಗೆ ಹೃದಯಾಘಾತ: ಆರೋಗ್ಯ ಸ್ಥಿರ

Update: 2017-04-25 22:54 IST

 ಕೋಲ್ಕತಾ, ಎ.25: ಅಭ್ಯಾಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಭಾರತದ ಮಾಜಿ ಅಂತಾರಾಷ್ಟ್ರೀಯ ಆಟಗಾರ ಹಾಗೂ ಈಸ್ಟ್‌ಬಂಗಾಳದ ಡಿಫೆಂಡರ್ ಅನ್ವರ್ ಅಲಿಗೆ ಹೃದಯಾಘಾತವಾಗಿದೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ.

ಸೆಂಟ್ರಲ್ ಡಿಫೆಂಡರ್ ಅಲಿ ಅಭ್ಯಾಸ ನಡೆಸಿ ವಾಪಸಾಗುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಅವರ ಜೊತೆಗಿದ್ದ ಸಹ ಆಟಗಾರ ಗುರ್ವಿಂದರ್ ಸಿಂಗ್ ಅವರು ಅಲಿಯವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ.

‘‘ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇಸಿಜಿ ಹಾಗೂ ಆ್ಯಂಜಿಯೊಗ್ರಾಮ್ ವರದಿಯಲ್ಲಿ ಹೃದಯದಲ್ಲಿ ಹೆಚ್ಚಿನ ಬ್ಲಾಕೇಜ್ ಆಗಿರುವುದು ಗೊತ್ತಾಗಿದೆ. ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಸ್ಥಿರವಾಗಿದ್ದಾರೆ ಎಂದು ಮೆಡಿಕಾ ಸೂಪರ್‌ಸ್ಪೆಷಾಲಿಟಿ ಹಾಸ್ಪಿಟಲ್‌ನ ಕಾರ್ಡಿಯೊಲಾಜಿಸ್ಟ್ ಸಂದೀಪ್ ಬ್ಯಾನರ್ಜಿ ತಿಳಿಸಿದ್ದಾರೆ.

ಅಲಿ ಅವರನ್ನು ಮುಂಬರುವ ಫೆಡರೇಶನ್ ಕಪ್‌ನಲ್ಲಿ ಫಿಟ್ ಆಗಿಸಲು ನಿಟ್ಟಿನಲ್ಲಿ ನಾವು ಪ್ರಯತ್ನಪಡಲಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮೊದಲು ರಕ್ತದ ವರದಿಗಾಗಿ ಕಾಯುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News