ಚಾಂಪಿಯನ್ಸ್ ಟ್ರೋಫಿ;ಪಾಕ್ ತಂಡಕ್ಕೆ ಉಮರ್ ಅಕ್ಮಲ್, ಅಝರ್ ಅಲಿ
Update: 2017-04-25 23:34 IST
ಕರಾಚಿ, ಎ.25: ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಮಾಜಿ ನಾಯಕ ಅಝರ್ ಅಲಿ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
27ರ ಹರೆಯದ ಆರಂಭಿಕ ದಾಂಡಿಗ ಫಕಾರ್ ಝಮಾನ್, ಆಲ್‌ರೌಂಡರ್ ಫಹಿಮಾ ಅಶ್ರಫ್, 18ರ ಹರೆಯದ ಲೆಗ್‌ಸ್ಪಿನ್ನರ್ ಶಾದಾಬ್ ಖಾನ್ ತಂಡದಲ್ಲಿ ಪ್ರವೇಶ ಗಿಟ್ಟಿಸಿಕೊಂಡಿರುವ ಹೊಸಮುಖಗಳು
ಪಾಕಿಸ್ತಾನ ಜೂನ್ 4ರಂದು ಭಾರತದ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಪಾಕಿಸ್ತಾನ ತಂಡ: ಸರ್ಫರಾಝ್ ಅಹ್ಮದ್(ನಾಯಕ), ಅಹ್ಮದ್ ಶೆಹ್‌ಝಾದ್, ಅಝರ್ ಅಲಿ, ಬಾಬರ್ ಅಝಮ್, ಫಯೀಮ್ ಅಶ್ರಫ್, ಫಾಖರ್ ಝಮಾನ್,ಹಸನ್ ಅಲಿ, ಇಮಾದ್ ವಸೀಂ,ಜುನೈದ್ ಖಾನ್, ಮುಹಮ್ಮದ್ ಆಮಿರ್, ಮುಹಮ್ಮದ್ ಹಫೀಝ್, ಶಾಹ್‌ದಾಬ್ ಖಾನ್, ಶುಐಬ್ ಮಲಿಕ್, ಉಮರ್ ಅಕ್ಮಲ್, ವಹಾಬ್ ರಿಯಾಝ್ .