ಅಮೆರಿಕ ತಂಡದಲ್ಲಿ ಭಾರತ ಮೂಲದ ಖಲೀಲ್‌ಗೆ ಸ್ಥಾನ

Update: 2017-04-25 18:40 GMT

ನ್ಯೂಯಾರ್ಕ್, ಎ.25: ಉಗಾಂಡದಲ್ಲಿ ಮುಂದಿನ ತಿಂಗಳು ನಡೆಯಲಿರುವ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಜನ್-3 ಟೂರ್ನಮೆಂಟ್‌ನಲ್ಲಿ ಆಡಲಿರುವ ಅಮೆರಿಕ ಕ್ರಿಕೆಟ್ ತಂಡದಲ್ಲಿ ಭಾರತ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಬ್ರಾಹೀಂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಹೈದರಾಬಾದ್ ಮೂಲದ ಖಲೀಲ್ ಅವರು ಭಾರತದಲ್ಲಿ ಪ್ರಥಮ ದರ್ಜೆ ಪಂದ್ಯದಲ್ಲಿ ಗರಿಷ್ಠ ಬಲಿ ಪಡೆದ ದಾಖಲೆ ಹೊಂದಿದ್ದಾರೆ. 2014-15ರಲ್ಲಿ ಹೈದರಾಬಾದ್ ರಣಜಿ ತಂಡದಲ್ಲಿ ಆಡಿದ್ದರು. ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಖಲೀಲ್ ಎಪ್ರಿಲ್ 14ರಂದು ಅಮೆರಿಕದ ಪೌರತ್ವ ಪಡೆದಿದ್ದಾರೆ. ಇದೀಗ ಅಮೆರಿಕ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಖಲೀಲ್‌ಗೆ ನಮೀಬಿಯಾ ವಿರುದ್ಧ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಐಸಿಸಿ ನಿಯಮ ಪ್ರಕಾರ ಒಂದು ದೇಶದ ಪರ ಆಡಬೇಕಾದರೆ ಆ ದೇಶದಲ್ಲಿ ಸತತ ನಾಲ್ಕು ವರ್ಷಗಳ ವಾಸ್ತವ್ಯ ಹೊಂದಿರಬೇಕು. ಆದರೆ ಖಲೀಲ್ 2014-15ರಲ್ಲಿ ಭಾರತದಲ್ಲಿ ರಣಜಿ ತಂಡದಲಲಿ ಆಡಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ.

ಪ್ರಸ್ತುತ ಚಿಕಾಗೋದಲ್ಲಿ ನೆಲೆಸಿರುವ ಖಲೀಲ್ ಅವರ ಪತ್ನಿ 2013ರಿಂದ ಅಮೆರಿಕದಲ್ಲಿ ವೈದ್ಯರಾಗಿದ್ದಾರೆ. ಪತ್ನಿ ಜತೆ ಅಲ್ಲೆ ನೆಲೆಸಿರುವ ಖಲೀಲ್ 2015ರಲ್ಲಿ ತನ್ನನ್ನು ಇನ್ನು ಆಯ್ಕೆಗೆ ಪರಿಗಣಿಸದಿರುವಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಿದ್ದರು. ಖಲೀಲ್ 57 ಪ್ರಥಮ ದರ್ಜೆ ಪಂದ್ಯಗಳಲ್ಲಿ 2,158 ರನ್ ಮತ್ತು 211 ಬಲಿ ಪಡೆದಿದ್ದಾರೆ.39ಲೀಸ್ಟ್ ಎ’ ಮತ್ತು 18ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ.ಸ್ನೇಹಿತರೊಬ್ಬರು ಖಲೀಲ್‌ರನ್ನು ಚಿಕಾಗೋದ ಕ್ರಿಕೆಟ್ ಕ್ಲಬ್‌ಗೆ ಪರಿಚಯಿಸಿದ್ದರು.

34ರ ಹರೆಯದ ಎಂ.ಎ. ಖಲೀಲ್ ತಂದೆ 1980ರಲ್ಲಿ ರೈಲ್ವೇ ಪರ 1980ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು.2007ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ ಸೇರಿದ್ದರು. ಯುಎಸ್‌ಎ ಕ್ರಿಕೆಟ್ ತಂಡದಲ್ಲಿ ಖಲೀಲ್ ಅವರೊಂದಿಗೆ ಭಾರತದ ಟೈಮಿಲ್ ಪಟೇಲ್ ಸ್ಥಾನ ಪಡೆದಿದ್ದಾರೆ. ಅವರು ಈ ಹಿಂದೆ ಇಂಡಿಯಾ ಅಂಡರ್-19 ತಂಡ ಮತ್ತು ಗುಜರಾತ್ ಪರ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಿದ್ದರು.

,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News