×
Ad

ಬಾರ್ಸಿಲೋನ ಓಪನ್: ನಡಾಲ್‌ಗೆ 50ನೆ ಗೆಲುವು

Update: 2017-04-28 23:59 IST

ಮ್ಯಾಡ್ರಿಡ್, ಎ.28: ಬಾರ್ಸಿಲೋನಾ ಓಪನ್‌ನಲ್ಲಿ ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಅವರು ಫೆಲಿಸಿಯಾನೊ ಲೊಪೆಝ್ ವಿರುದ್ಧ ಅಜೇಯ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡರೆ, ರಫೆಲ್ ನಡಾಲ್ 50ನೆ ಗೆಲುವು ಸಾಧಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಮರ್ರೆ ಅವರು ಲೊಪೆಝ್‌ರನ್ನು 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಲೊಪೆಝ್ ವಿರುದ್ಧ ಆಡಿರುವ ಎಲ್ಲ 11 ಪಂದ್ಯಗಳನ್ನು ಗೆದ್ದುಕೊಂಡು ಅಜೇಯ ದಾಖಲೆ ಮುಂದುವರಿಸಿದರು.

ದಕ್ಷಿಣ ಆಫ್ರಿಕದ ಕೇವಿನ್ ಆ್ಯಂಡರ್ಸನ್‌ರನ್ನು 6-3, 6-4 ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ನಡಾಲ್ ಸ್ಪೇನ್ ನಗರದಲ್ಲಿ 50ನೆ ಗೆಲುವು ದಾಖಲಿಸಿದರು. 10ನೆ ಬಾರಿ ಬಾರ್ಸಿಲೋನ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಜೆಜೆಒಜ ಇಟ್ಟರು.

ಇತ್ತೀಚೆಗಷ್ಟೇ ಮೊಂಟೆಕಾರ್ಲೊ ಟ್ರೋಫಿಯನ್ನು ಜಯಿಸಿದ್ದ ನಡಾಲ್ ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯದ ಚುಂಗ್ ಹಿಯೊನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News