ಆರ್‌ಸಿಬಿಗೆ ಹೀನಾಯ ಸೋಲು

Update: 2017-04-29 17:20 GMT

ಪುಣೆ, ಎ.28: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇಲ್ಲಿ ನಡೆದ ಐಪಿಎಲ್‌ನ 34ನೆ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ವಿರುದ್ಧ 61 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ತಂಡ ಗೆಲುವಿಗೆ 158 ರನ್‌ಗಳ ಸವಾಲನ್ನು ಪಡೆದಿತ್ತು. ಆದರೆ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 96 ರನ್ ಗಳಿಸಲಷ್ಟೇ ಶಕ್ತವಾಯಿತು.ನಾಯಕ ವಿರಾಟ್ ಕೊಹ್ಲಿ 55 ರನ್(48ಎ, 4ಬೌ, 1ಸಿ) ಗಳಿಸಿ ತಂಡದ ಸೋಲನ್ನು ತಪ್ಪಿಸಲು ಕೊನೆಯ ತನಕ ಹೋರಾಟ ನಡೆಸಿದರೂ ಅವರ ಪ್ರಯತ್ನ ವಿಫಲಗೊಂಡಿತು.

ಕೊಹ್ಲಿ ಅವರನ್ನು ಹೊರತುಪಡಿಸಿದರೆ ತಂಡದ ಯಾವನೇ ಆಟಗಾರನಿಗೆ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ.

ಪುಣೆ ತಂಡದ ಇಮ್ರಾನ್ ತಾಹಿರ್(18ಕ್ಕೆ 3), ಫರ್ಗ್ಯುಸನ್(7ಕ್ಕೆ 2), ಉನಾದ್ಕಟ್ (19ಕ್ಕೆ 1), ಕ್ರಿಸ್ಟಿಯನ್(25ಕ್ಕೆ 1) ಮತ್ತು ವಾಷಿಂಗ್ಟನ್ ಸುಂದರ್(7ಕ್ಕೆ 1) ದಾಳಿಗೆ ಸಿಲುಕಿದ ಆರ್‌ಸಿಬಿಯ ಪರ ನಾಯಕ ಕೊಹ್ಲಿ ಅರ್ಧಶತಕ ಬಾರಿಸಿರುವುದನ್ನು ಹೊರತುಪಡಿಸಿದರೆ ಎಸ್ ಅರವಿಂದ್(8) ಗಳಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

 10 ಓವರ್‌ಗಳ ಮುಕ್ತಾಯಕ್ಕೆ 53ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಬಳಿಕ ಸೋಲಿನ ದವಡೆಗೆ ಸಿಲುಕಿತು.

ಟ್ರಾವಿಸ್ ಹೆಡ್(2), ಎಬಿ ಡಿವಿಲಿಯರ್ಸ್‌(3), ಕೇದಾರ್ ಜಾಧವ್(7), ಸಚಿನ್ ಬೇಬಿ(2), ಸ್ಟುವರ್ಟ್ ಬಿನ್ನಿ(1), ಪವನ್ ನೇಗಿ(3), ಮಿಲ್ನೆ(5), ಬದ್ರಿ(2), ಚಾಹಲ್(ಔಟಾಗದೆ 4) ಒಂದಂಕೆಯ ಸ್ಕೋರ್ ದಾಖಲಿಸಿದರು. ಇದು ತಂಡದ ಗೆಲುವಿಗೆ ಸಾಕಾಗಲಿಲ್ಲ. ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಫರ್ಗ್ಯುಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ಫರ್ಗ್ಯುಸನ್ (4-1-7-2)ಅವರು ಬಿನ್ನಿ ಮತ್ತು ಡಿವಿಲಿಯರ್ಸ್‌ ವಿಕೆಟ್ ಉಡಾಯಿಸಿದ್ದರು.

ಜಾಧವ್‌ರನ್ನು ರನೌಟ್ ಮಾಡಿದ್ದರು. ಪುಣೆ 157/3: ಇದಕ್ಕೂ ಮೊದಲು ಪುಣೆ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪುಣೆ ತಂಡದ ಆರಂಭಿಕ ದಾಂಡಿಗ ಅಜಿಂಕ್ಯ ರಹಾನೆ(6) ಅವರನ್ನು ಬೇಗನೆ ಕಳೆದುಕೊಂಡಿದ್ದರೂ ಬಳಿಕ ರಾಹುಲ್ ತ್ರಿಪಾಠಿ37 ರನ್( 28ಎ, 4ಬೌ,1ಸಿ), ನಾಯಕ ಸ್ಮಿತ್ 45 ರನ್(32ಎ, 5ಬೌ,1ಸಿ) , ಮನೋಜ್ ತಿವಾರಿ ಔಟಾಗದೆ 44( 35ಎ, 4ಬೌ,1ಸಿ) ಮತ್ತು ಮಾಜಿ ನಾಯಕ ಧೋನಿ ಔಟಾಗದೆ 21 ರನ್(17ಎ, 1ಬೌ,1ಸಿ) ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News