ಸುಲ್ತಾನ್ ಅಝ್ಲಾನ್ ಶಾ ಕಪ್ : ಭಾರತ -ಗ್ರೇಟ್ ಬ್ರಿಟನ್ ಪಂದ್ಯ ಡ್ರಾ

Update: 2017-04-29 17:23 GMT

ಇಫೋ, ಎ.29: ಸುಲ್ತಾನ್ ಅಝ್ಲಾನ್ ಶಾ ಕಪ್ ಟೂರ್ನಮೆಂಟ್‌ನಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್ ತಂಡಗಳ ನಡುವಿನ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿದೆ. 26ನೆ ಆವೃತ್ತಿಯ ಟೂರ್ನಮೆಂಟ್‌ನಲ್ಲಿ ಆಕಾಶ್ ದೀಪ್ ಸಿಂಗ್ ಮತ್ತು ಮನ್‌ದೀಪ್ ಸಿಂಗ್ ಬಾರಿಸಿದ ತಲಾ 1 ಫೀಲ್ಡ್ ಗೋಲುಗಳ ನೆರವಿನಲ್ಲಿ ಭಾರತ ಡ್ರಾ ಸಾಧಿಸಿತು.

ಮಳೆಬಾಧಿತ ಪಂದ್ಯದಲ್ಲಿ ಭಾರತದ ಪರ ಆಕಾಶ್‌ದೀಪ್ ಸಿಂಗ್ 19ನೆ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ ಆರಂಭದಲ್ಲೇ 1-0 ಸಾಧಿಸಲು ನೆರವಾದರು.
ಗ್ರೇಟ್ ಬ್ರಿಟನ್‌ನ ಟಾಮ್ ಕಾರ್ಸನ್ 25ನೆ ನಿಮಿಷದಲ್ಲಿ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು. 48ನೆ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಗೋಲು ಕಬಳಿಸಿ ಭಾರತಕ್ಕೆ 2-1 ಮುನ್ನಡೆ ಸಾಧಿಸಲು ನೆರವಾದರು. ಆದರೆ 52ನೆ ನಿಮಿಷದಲ್ಲಿ ಗ್ರೇಟ್ ಬ್ರಿಟನ್‌ನ ಆ್ಯಲನ್ ಫಾರ್ಸಿಯತ್ ಗೋಲು ಬಾರಿಸಿ 2-2 ಸಮಬಲ ಸಾಧಿಸಲು ಸಹಾಯ ಮಾಡಿದರು.

ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿಯಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ 2-1 ಅಂತರದಲ್ಲಿ ಜಯ ಸಾಧಿಸಿತ್ತು. ಆದರೆ ಅದೇ ಪ್ರದರ್ಶನ ಕಂಡು ಬರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News