ಬಾರ್ಸಿಲೋನ ಓಪನ್: ನಡಾಲ್ ಚಾಂಪಿಯನ್

Update: 2017-04-30 17:39 GMT

ಬಾರ್ಸಿಲೋನ, ಎ.30: ಆಸ್ಟ್ರೇಲಿಯದ ಡೊಮಿನಿಕ್ ಥೀಮ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ಸೂಪರ್ ಸ್ಟಾರ್ ರಫೆಲ್ ನಡಾಲ್ ಬಾರ್ಸಿಲೋನ ಓಪನ್‌ನಲ್ಲಿ 10ನೆ ಬಾರಿ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರವಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನಡಾಲ್ ಅವರು ಡೊಮಿನಿಕ್ ವಿರುದ್ಧ 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿ ಆವೆಮಣ್ಣಿನ ಅಂಗಣದಲ್ಲಿ 51ನೆ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಈ ಗೆಲುವಿನ ಮೂಲಕ 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಮುಂದಿನ ತಿಂಗಳು ಆರಂಭವಾಗಲಿರುವ ಫ್ರೆಂಚ್ ಓಪನ್ ಟೂರ್ನಿಗೆ ಉತ್ತಮ ತಯಾರಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News