ಲಯನ್ಸ್ ವೇಗದ ಬೌಲರ್ ಟೈ ಐಪಿಎಲ್‌ಗೆ ಅಲಭ್ಯ

Update: 2017-04-30 17:42 GMT

ಹೊಸದಿಲ್ಲಿ, ಎ.30: ಗಂಭೀರ ಭುಜನೋವಿಗೆ ಒಳಗಾಗಿರುವ ಗುಜರಾತ್ ಲಯನ್ಸ್ ತಂಡದ ವೇಗದ ಬೌಲರ್ ಆ್ಯಂಡ್ರೂ ಟೈ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಚೆಂಡನ್ನು ತಡೆಯುವ ಯತ್ನದಲ್ಲಿದ್ದಾಗ ವೇಗದ ಬೌಲರ್ ಟೈ ಭುಜಕ್ಕೆ ಗಾಯವಾಗಿತ್ತು. ಆಸ್ಟ್ರೇಲಿಯ ಆಟಗಾರ ಟೈ ಅವರನ್ನು ತಕ್ಷಣವೇ ಮೈದಾನದಿಂದ ಹೊರಗೆ ಕೊಂಡೊಯ್ಯಲಾಯಿತು. ಮತ್ತೆ ಫೀಲ್ಡಿಂಗ್‌ಗೆ ಇಳಿಯದ ಟೈ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಐಪಿಎಲ್ ಹರಾಜಿನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸೇರಿಕೊಂಡಿದ್ದ ಟೈ ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಈತನಕ ಆಡಿರುವ 6 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಒಂದು ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ 17 ರನ್‌ಗೆ 5 ವಿಕೆಟ್ ಗೊಂಚಲನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News