ಶ್ರೀಲಂಕಾ ಬೌಲಿಂಗ್ ಸಲಹೆಗಾರರಾಗಿ ಅಲನ್ ಡೊನಾಲ್ಡ್ ನೇಮಕ

Update: 2017-04-30 17:49 GMT

ಹೊಸದಿಲ್ಲಿ, ಎ.30: ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ತಯಾರಿಯಾಗುವ ನಿಟ್ಟಿನಲ್ಲಿ ತಂಡದ ಬೌಲಿಂಗ್ ಸಲಹೆಗಾರರಾಗಿ ದಕ್ಷಿಣ ಆಫ್ರಿಕದ ಮಾಜಿ ವೇಗದ ಬೌಲರ್ ಅಲನ್ ಡೊನಾಲ್ಡ್‌ರನ್ನು ಶ್ರೀಲಂಕಾ ನೇಮಕ ಮಾಡಿದೆ.

ಪ್ರಸ್ತುತ ಇಂಗ್ಲೆಂಡ್ ಕೌಂಟಿ ತಂಡ ಕೆಂಟ್‌ನ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಡೊನಾಲ್ಡ್ ಎರಡು ತಿಂಗಳ ಕಾಲ ಶ್ರೀಲಂಕಾದ ವೇಗದ ಬೌಲಿಂಗ್‌ನ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

50ರ ಪ್ರಾಯದ ಡೊನಾಲ್ಡ್ 12 ವರ್ಷಗಳ ಏಕದಿನ ವೃತ್ತಿಬದುಕಿನಲ್ಲಿ 227 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಡೊನಾಲ್ಡ್ ಮೇ 9 ರಿಂದ 16ರ ತನಕ ಪಲ್ಲೆಕಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಶ್ರೀಲಂಕಾದ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ತನ್ನ ಕರ್ತವ್ಯ ಆರಂಭಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News