ಸುಯರೆಝ್ ಅವಳಿ ಗೋಲು: ಬಾರ್ಸಿಲೋನಕ್ಕೆ ಜಯ

Update: 2017-04-30 17:51 GMT

  ಬಾರ್ಸಿಲೋನ, ಎ.30: ಸ್ಪಾನೀಶ್ ಲಾಲಿಗ ಪಂದ್ಯದಲ್ಲಿ ಲೂಯಿಸ್ ಸುಯರೆಝ್ ಬಾರಿಸಿದ ಅವಳಿ ಗೋಲು ನೆರವಿನಿಂದ ಎಸ್ಪಾನಿಯೊಲ್ ತಂಡವನ್ನು 3-0 ಅಂತರದಿಂದ ಮಣಿಸಿದ ಬಾರ್ಸಿಲೋನ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

ಬಾರ್ಸಿಲೋನದ ಪರ ಸುಯರೆಝ್ 50ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 76ನೆ ನಿಮಿಷದಲ್ಲಿ ಗೋಲು ಬಾರಿಸಿದ ಇವಾನ್ ರಾಕ್‌ಟಿಕ್ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

87ನೆ ನಿಮಿಷದಲ್ಲಿ ಗೋಲು ಬಾರಿಸಿರುವ ಸುಯರೆಝ್ ಬಾರ್ಸಿಲೋನ 3-0 ಅಂತರದಿಂದ ಜಯ ಸಾಧಿಸಲು ನೆರವಾದರು.

ಕಳೆದ 5 ಪಂದ್ಯಗಳಲ್ಲಿ ಗೋಲು ಬಾರಿಸಲು ವಿಫಲವಾಗಿದ್ದ ಸುಯರೆಝ್ ಇದೀಗ ಗೋಲು ಬರವನ್ನು ನೀಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News