ಡೆವಿಲ್ಸ್ ನ್ನು ಓಡಿಸಿದ ಕಿಂಗ್ಸ್ : ಸಂದೀಪ್ ಶರ್ಮ ಪ್ರಹಾರಕ್ಕೆ ನಡುಗಿದ ಡೆಲ್ಲಿ 67ಕ್ಕೆ ಆಲೌಟ್

Update: 2017-04-30 18:26 GMT

ಮೊಹಾಲಿ, ಎ.30:ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 36ನೆ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

ಗೆಲುವಿಗೆ 68 ರನ್‌ಗಳ ಸವಾಲನ್ನು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇನ್ನೂ 73 ಎಸೆತಗಳು ಬಾಕಿ ಇರುವಾಗಲೇ ವಿಕೆಟ್ ನಷ್ಟವಿಲ್ಲದೆ 68 ರನ್ ಗಳಿಸಿತು.

ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ ಔಟಾಗದೆ 50 ರನ್(27ಎ, 6ಬೌ,3ಸಿ) ಮತ್ತು ಹಾಶಿಮ್ ಅಮ್ಲ ಔಟಾಗದೆ 16 ರನ್(20ಎ,1ಬೌ) ಗಳಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

 ಡೆಲ್ಲಿ 67ಕ್ಕೆ ಆಲೌಟ್: ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸಂದೀಪ್ ಶರ್ಮ (20ಕ್ಕೆ 4) ದಾಳಿಗೆ ಸಿಲುಕಿ 17.1 ಓವರ್‌ಗಳಲ್ಲಿ 67 ರನ್‌ಗಳಿಗೆ ಆಲೌಟಾಗಿತ್ತು.

 67 ರನ್ ಇದು ಐಪಿಎಲ್‌ನ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ಕನಿಷ್ಠ ಸ್ಕೋರ್ ಆಗಿದೆ.ಇದು ಡೆಲ್ಲಿ ಡೇರ್‌ಡೆವಿಲ್ಸ್ ಐಪಿಎಲ್ ಟೂರ್ನಿಯ 10 ಆವೃತ್ತಿಗಳಲ್ಲಿ ನೀಡಿದ ಅತ್ಯಂತ ಕಳಪೆ ಪ್ರದರ್ಶನವಾಗಿದೆ.

ನಾಯಕ ಝಹೀರ್ ಖಾನ್ ಅನುಪಸ್ಥಿತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದ ಕರುಣ್ ನಾಯರ್ ತಂಡವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ವಿಫಲರಾದರು.

ಮೊಹಾಲಿಯ ನಿಧಾನಗತಿಯ ಬೌಲಿಂಗ್ ಪಿಚ್‌ನಲ್ಲಿ ಸಂದೀಪ್ ಶರ್ಮ ಪ್ರಹಾರ ಆರಂಭಿಸಿ ಆರಂಭಿಕ ದಾಂಡಿಗ ಬಿಲ್ಲಿಂಗ್ಸ್ (0) ಅವರನ್ನು ಖಾತೆ ತೆರೆಯಲು ಅವಕಾಶ ನೀಡದೆ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಪೆವಿಲಿಯನ್‌ಗೆ ಅಟ್ಟಿದರು.

ಸಂಜು ಸ್ಯಾಮ್ಸನ್ 14 ಎಸೆತಗಳಲ್ಲಿ 1 ಬೌಂಡರಿ ಒಳಗೊಂಡ 5 ರನ್ ಗಳಿಸಿ ಸಂದೀಪ್ ಶರ್ಮಗೆ ವಿಕೆಟ್ ಒಪ್ಪಿಸಿದರು. ಹಂಗಾಮಿ ನಾಯಕ ಕರುಣ್ ನಾಯರ್ 11ರನ್(10ಎ,1ಸಿ) ಗಳಿಸಿ ಅಕ್ಷರ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು.ವಿಕೆಟ್ ಕೀಪರ್ ರಿಷಭ್ ಪಂತ್ (3)ಅವರನ್ನು ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

ಮೊರಿಸ್ ಅವರು ಅಕ್ಷರ್ ಪಟೇಲ್‌ಗೆ ರಿಟರ್ನ್ ಕ್ಯಾಚ್ ನೀಡಿ ವಾಪಸಾದರು. ಕೋರಿ ಆ್ಯಂಡರ್ಸನ್ 18 ರನ್(25ಎ, 1ಸಿ) ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್. ಆ್ಯಂಡರ್ಸನ್ ಅವರು ಆ್ಯರೊನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ರಬಾಡ(11), ಮುಹಮ್ಮದ್ ಶಮಿ(2) ವಿಕೆಟ್ ಪಡೆಯುವುದರೊಂದಿಗೆ ಸಂದೀಪ್ ಶರ್ಮ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ನದೀಮ್ (0) ಅವರು ಮೋಹಿತ್ ಶರ್ಮಗೆ ರಿಟರ್ನ್ ಕ್ಯಾಚ್ ನೀಡುವುದರೊಂದಿಗೆ ಡೆಲ್ಲಿ ತನ್ನ ಬ್ಯಾಟಿಂಗ್‌ನ್ನು ಮುಗಿಸಿತು.

ಸಂದೀಪ್ ಶರ್ಮ 4 ವಿಕೆಟ್, ಅಕ್ಷರ ಪಟೇಲ್ ಮತ್ತು ಆ್ಯರನ್ ತಲಾ 2 ವಿಕೆಟ್ ,ಮೋಹಿತ್ ಶರ್ಮ ಮತ್ತು ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಹಂಚಿಕೊಂಡರು. ಸ್ಕೋರ್ ಪಟ್ಟಿ

ಡೆಲ್ಲಿ ಡೇರ್‌ಡೆವಿಲ್ಸ್ 17.1 ಓವರ್‌ಗಳಲ್ಲಿ ಆಲೌಟ್67

ಸ್ಯಾಮ್ಸನ್ ಸಿ ಶರ್ಮ ಬಿ ಸಂದೀಪ್05

ಬಿಲ್ಲಿಂಗ್ಸ್ ಸಿ ಸಹಾ ಬಿ ಸಂದೀಪ್00

ಕೆಕೆ ನಾಯರ್ ಬಿ ಪಟೇಲ್11

ಅಯ್ಯರ್ ಸಿ ಆ್ಯಂಡ್ ಬಿ ಸಂದೀಪ್06

ರಿಷಭ್ ಪಂತ್ ಎಲ್‌ಬಿಡಬ್ಲು ಬಿ ಮ್ಯಾಕ್ಸ್‌ವೆಲ್03

ಆ್ಯಂಡರ್ಸನ್ ಬಿ ಆ್ಯರನ್ 18

ಮೊರೀಸ್ ಸಿ ಆ್ಯಂಡ್ ಬಿ ಪಟೇಲ್ 02

ರಬಾಡ ಸಿ ಮಿಶ್ರಾ ಬಿ ಸಂದೀಪ್ 11

ಅಮಿತ್ ಮಿಶ್ರಾ ಔಟಾಗದೆ04

ಎಂ. ಶಮಿ ಸಿ ಸಂದೀಪ್ ಬಿ ಆ್ಯರನ್02

ನದೀಮ್ ಸಿ ಆ್ಯಂಡ್ ಬಿ ಶರ್ಮ 00

ಇತರೆ05

ವಿಕೆಟ್ ಪತನ: 1-1, 2-7, 3-22, 4-25, 5-30, 6-33, 7-59, 8-62, 9-67

ಬೌಲಿಂಗ್ ವಿವರ

ಸಂದೀಪ್ ಶರ್ಮ 4.0-0-20-4

ನಟರಾಜನ್ 2.0-0-07-0

ಮೊಹಿತ್ ಶರ್ಮ1.1-0-03-1

ಎ.ಪಟೇಲ್4.0-0-22-2

ಮ್ಯಾಕ್ಸ್‌ವೆಲ್ 4.0-0-12-1

ಆ್ಯರೊನ್ 2.0-0-03-2

ಕಿಂಗ್ಸ್ ಇಲೆವೆನ್ ಪಂಜಾಬ್ 7.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 68

ಗಪ್ಟಿಲ್ ಔಟಾಗದೆ50

ಅಮ್ಲ ಔಟಾಗದೆ16

ಇತರೆ02

ಬೌಲಿಂಗ್ ವಿವರ

ಎಂ.ಶಮಿ 2.0-0-19-0

ರಬಾಡ2.0-0-18-0

ಮೊರೀಸ್ 2.0-0-13-0

ಎ.ಮಿಶ್ರಾ1.0-0-09-0

ನದೀಮ್0.5-0-09-0

ಪಂದ್ಯಶ್ರೇಷ್ಠ :ಸಂದೀಪ್ ಶರ್ಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News