ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ವಿಜೇತರ ಮೊತ್ತದಲ್ಲಿ ಭಾರೀ ಹೆಚ್ಚಳ
ಲಂಡನ್, ಮೇ 3: ಈವರ್ಷದ ವಿಂಬಲ್ಡನ್ ಸಿಂಗಲ್ಸ್ ಟೆನಿಸ್ ಚಾಂಪಿಯನ್‌ಗಳು ತಲಾ 2.2 ಮಿಲಿಯನ್ ಪೌಂಡ್ಸ್(2.84 ಮಿಲಿಯನ್ ಡಾಲರ್) ಬಹುಮಾವನ್ನು ಸ್ವೀಕರಿಸಲಿದ್ದಾರೆ ಎಂದು ಟೂರ್ನಿಯ ಆಯೋಜಕರು ಬುಧವಾರ ಘೋಷಿಸಿದ್ದಾರೆ.
ಈ ವರ್ಷದ ವಿಂಬಲ್ಡನ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಆಟಗಾರರ ಬಹುಮಾನ ವೊತ್ತವನ್ನು 200,000 ಪೌಂಡ್‌ಗೆ ಹೆಚ್ಚಳ ಮಾಡಲಾಗಿದೆ. ಪ್ರಶಸ್ತಿಯ ಒಟ್ಟು ಮೊತ್ತವನ್ನು 28.1 ಮಿಲಿಯನ್ ಪೌಂಡ್‌ನಿಂದ 31.6 ಮಿಲಿಯನ್ ಪೌಂಡ್‌ಗೆ ಹೆಚ್ಚಳ ಮಾಡಲಾಗಿದೆ ಎಂದು ಟೂರ್ನಮೆಂಟ್‌ನ ಮುಖ್ಯಸ್ಥರು ತಿಳಿಸಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಸೋಲುವ ಆಟಗಾರರು 35,000 ಪೌಂಡ್ ಬಹುಮಾನವನ್ನು ಪಡೆಯಲಿದ್ದಾರೆ. ಇದು ಕಳೆದ ವರ್ಷಕ್ಕಿಂತ 17 ಶೇ. ಹೆಚ್ಚಳವಾಗಿದೆ. ಈ ವರ್ಷದ ಅಮೆರಿಕನ್ ಓಪನ್‌ನ ಬಹುಮಾನ ಮೊತ್ತವನ್ನು ಇನ್ನಷ್ಟೇ ಘೋಷಿಸಬೇಕಾಗಿದೆ. ಹುಲ್ಲುಹಾಸಿನ ಅಂಗಣದಲ್ಲಿ ನಡೆಯಲಿರುವ ವಿಂಬಲ್ಡನ್ ಗ್ರಾನ್‌ಸ್ಲಾಮ್ ಟೂರ್ನಮೆಂಟ್ ಲಂಡನ್‌ನಲ್ಲಿ ಜು.3 ರಿಂದ 16ರ ತನಕ ನಡೆಯಲಿದೆ