8 ಮಕ್ಕಳನ್ನು ಕೊಂದ ಮಹಿಳೆಯ ವಿಚಾರಣೆಯಿಲ್ಲ : ಆಸ್ಟ್ರೇಲಿಯ

Update: 2017-05-04 15:06 GMT

ಬ್ರಿಸ್ಬೇನ್, ಮೇ 4: ತನ್ನ ಏಳು ಮಕ್ಕಳು ಮತ್ತು ಸಂಬಂಧಿಕರ ಮಗುವೊಂದನ್ನು ಇರಿದು ಕೊಂದ ಆಸ್ಟ್ರೇಲಿಯದ ಮಹಿಳೆಯ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಲಾಗುವುದಿಲ್ಲ ಎಂದು ನ್ಯಾಯಾಲಯವೊಂದು ತೀರ್ಪು ನೀಡಿದೆ.

ತೀರ್ಪನ್ನು ಗುರುವಾರ ಬಹಿರಂಗಪಡಿಸಲಾಗಿದೆ. ಈ ಆಘಾತಕಾರಿ ಘಟನೆ 2014ರಲ್ಲಿ ಉತ್ತರ ಆಸ್ಟ್ರೇಲಿಯದಲ್ಲಿ ನಡೆದಿತ್ತು.ಈ ಮಹಿಳೆ ಮಾದಕದ್ರವ್ಯ ಸೇವನೆಯ ಚಟ ಹೊಂದಿದ್ದು, ಅದರ ಮತ್ತಿನಲ್ಲಿ ಆಕೆ ತನ್ನ ನಿಯಂತ್ರಣವನ್ನು ಕಳೆದುಕೊಂಡು ಈ ಹೀನ ಕೃತ್ಯ ಎಸಗಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ.
ಆಕೆಯನ್ನು ಅನಿರ್ದಿಷ್ಟಾವಧಿವರೆಗೆ ಮೇಲುಸ್ತುವಾರಿಯಲ್ಲಿ ಆಸ್ಪತ್ರೆಯಲ್ಲಿ ಇರಿಸಲಾಗುವುದು ಎಂದಿದೆ.

37 ವರ್ಷದ ರೈನಾ ತಾಯ್ಡೇ ಎರಡರಿಂದ ಹದಿನಾಲ್ಕು ವರ್ಷಗಳ ನಡುವಿನ ತನ್ನ ಮಕ್ಕಳನ್ನು 2014 ಡಿಸೆಂಬರ್ 19ರಂದು ಕೇರ್ನ್ಸ್‌ನಲ್ಲಿನ ತನ್ನ ಮನೆಯಲ್ಲಿ ಇರಿದು ಕೊಂದಿದ್ದಳು. ಬಳಿಕ ತನ್ನನ್ನೇ 35 ಬಾರಿ ತಿವಿದುಕೊಂಡಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News