×
Ad

ಶೂಟಿಂಗ್ ಟೂರ್ನಿ: ಭಾರತಕ್ಕೆ ಏಳು ಪದಕ, ಹೀನಾ ಸಿಧುಗೆ ಕಂಚು

Update: 2017-05-07 23:20 IST

ಹೊಸದಿಲ್ಲಿ, ಮೇ 7: ಲಿಬರೇಶನ್ ಪ್ಲೆಝ್ ಜಿಪಿ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡಿದ್ದು, ಕೂಟದ ಕೊನೆಯ ದಿನ ಹೀನಾ ಸಿಧು ವನಿತೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಜಯಿಸಿದರು.

8 ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ ಸ್ಪರ್ಧಿಸಿದ ಹೀನಾ 218.8 ಅಂಕ ಗಳಿಸಿ 3ನೆ ಸ್ಥಾನ ಪಡೆದರು. ಝೆಕ್ ರಿಪಬ್ಲಿಕ್‌ನಲ್ಲಿ ನಡೆದ ಶೂಟಿಂಗ್ ಟೂರ್ನಿಯಲ್ಲಿ ಭಾರತ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಜಯಿಸಿತು.

ಭಾರತದ ಪುರುಷರ 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ತಂಡ ಕ್ಲೀನ್‌ಸ್ವೀಪ್ ಸಾಧಿಸಿತು. ನೀರಜ್ ಕುಮಾರ್ ಚಿನ್ನದ ಪದಕ ಜಯಿಸಿದರೆ, ಹರ್‌ಪ್ರೀತ್ ಸಿಂಗ್ ಬೆಳ್ಳಿ ಹಾಗೂ ದೀಪಕ್ ಶರ್ಮ ಕಂಚಿನ ಪದಕ ಜಯಿಸಿದ್ದರು.

ಹಿರಿಯ ರೈಫಲ್ ಶೂಟರ್ ತೇಜಸ್ವಿನಿ ಸಾವಂತ್ 50 ಮೀ. ರೈಫಲ್‌ಪ್ರೊನ್ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದರು. ಪುರುಷರ 25 ಮೀ. ಸೆಂಟರ್ ಫೈಯರ್ ಪಿಸ್ತೂಲ್‌ನಲ್ಲಿ ಪೆಂಬಾ ತಮಂಗ್ ಕಂಚು ಗೆದ್ದುಕೊಂಡರು. ಟೂರ್ನಿಯ ಮೊದಲ ದಿನ ಅನ್ಮೂಲ್ ಜೈನ್ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗೆದ್ದುಕೊಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News