×
Ad

ಲಂಡನ್ ವರ್ಲ್ಡ್ಸ್‌ಗೆ ದೇವೇಂದ್ರ ಸಿಂಗ್ ಅರ್ಹತೆ

Update: 2017-05-08 23:36 IST

ಹೊಸದಿಲ್ಲಿ, ಮೇ 8: ಸರ್ವಿಸಸ್ ತಂಡದ ಜಾವೆಲಿನ್ ಎಸೆತಗಾರ ದೇವೇಂದ್ರ ಸಿಂಗ್ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ವಿಶ್ವ ಟೂರ್ನಿಗೆ ಅರ್ಹತೆ ಪಡೆದ ಭಾರತದ ಎರಡನೆ ಜಾವೆಲಿನ್ ಎಸೆತಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

84.57 ಮೀ. ದೂರಕ್ಕೆ ಜಾವೆಲಿನ್ ಎಸೆದಿದ್ದ ದೇವೇಂದ್ರ ಇಂಡಿಯನ್ ಗ್ರಾನ್‌ಪ್ರಿ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ವಿಶ್ವ ಅಥ್ಲೆಟಿಕ್ ಟೂರ್ನಿಯ ಅರ್ಹತಾ ಮಾರ್ಕ್(83 ಮೀ.) ತಲುಪಿದರು.

19ರ ಹರೆಯದ ನೀರಜ್ ಚೋಪ್ರಾ ಎ.28 ರಂದು ಚೀನಾದಲ್ಲಿ ನಡೆದಿದ್ದ ಏಷ್ಯನ್ ಗ್ರಾನ್‌ಪ್ರಿಯಲ್ಲಿ ಬೆಳ್ಳಿ ಪದಕವನ್ನು ಜಯಿಸುವುದರೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು.

ಆರ್ಮಿಯ ದೇವೇಂದ್ರ ಸಿಂಗ್ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಜಿಪಿ ಟೂರ್ನಿಯಲ್ಲಿ 80.21 ಮೀ.ದೂರ ಎಸೆದು ಜೀವನಶ್ರೇಷ್ಠ ಸಾಧನೆ ಮಾಡಿದ್ದರು.

ಲಂಡನ್‌ನಲ್ಲಿ ಆ.5 ರಿಂದ 13ರ ತನಕ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಈವರೆಗೆ 15 ಭಾರತೀಯರು ಅರ್ಹತೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News