×
Ad

ಕ್ರಿಸ್ ಗೇಲ್ ಈಗ ಹೂಡಿಕೆದಾರ

Update: 2017-05-10 23:24 IST

ಬೆಂಗಳೂರು, ಮೇ 10: ಯುವರಾಜ್ ಸಿಂಗ್ ಹಾಗೂ ಸೈನಾ ನೆಹ್ವಾಲ್‌ರಿಂದ ಪ್ರೇರೇಪಿತಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೂಡಿಕೆದಾರನಾಗಿ ಪರಿವರ್ತಿತರಾಗಿದ್ದು, ರಿಯಲ್ ಎಸ್ಟೇಟ್ ಸಹಿತ ಹಲವು ವ್ಯವಹಾರಗಳಲ್ಲಿ ಬಂಡವಾಳ ಹೂಡಲು ನಿರ್ಧರಿಸಿದ್ದಾರೆ.

 ‘‘ರೆಸ್ಟೊರೆಂಟ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಲು ಬಯಸಿದ್ದೇನೆ. ನಾನು ಈಗಾಗಲೇ ಕೆಲವು ಹೂಡಿಕೆ ಮಾಡಿದ್ದೇನೆ. ಜಮೈಕಾದಲ್ಲಿ ಟ್ರಿಪಲ್ ಸೆಂಚೂರಿ 333 ಸ್ಪೋರ್ಟ್ಸ್ ಬಾರ್ ಹಾಗೂ ರೆಸ್ಟೋರೆಂಟ್‌ನ್ನು ಆರಂಭಿಸಿದ್ದೇನೆ... ರಿಯಲ್ ಎಸ್ಟೇಟ್‌ನಲ್ಲಿ ಕೆಲವು ಹಣ ಹೂಡಿಕೆ ಮಾಡಿದ್ದೇನೆ..ಐಪಿಎಲ್‌ಗೆ ಮೊದಲು ಮನೆಯೊಂದನ್ನು ನಿರ್ಮಿಸಿದ್ದೇನೆ. ವಿಶ್ವದೆಲ್ಲೆಡೆ ಸುತ್ತಾಡಲು ಹಣವನ್ನು ಹೆಚ್ಚು ವ್ಯಯಿಸುವುದಿಲ್ಲ’’ ಎಂದು ಗೇಲ್ ತಿಳಿಸಿದ್ದಾರೆ.

    ‘‘ನಾನು ಕೆಲವು ಕಂಪೆನಿಗಳ ಶೇರ್‌ಗಳನ್ನು ಖರೀದಿಸಿದ್ದು, ಸ್ವಂತ ವಾಹನವನ್ನು ಹೊಂದಿದ್ದೇನೆ. ನಾವು ಹಣವನ್ನು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕಾಗುತ್ತದೆ. ನಾವು ಹಣ ಗಳಿಸಲು ಬಹಳಷ್ಟು ಕಷ್ಟಪಟ್ಟಿರುತ್ತೇವೆ.ಕೆಲವೊಮ್ಮೆ ಲಾಭ ಬರುತ್ತದೆ.ಇನ್ನೂ ಕೆಲವೊಮ್ಮೆ ನಷ್ಟವಾಗುತ್ತದೆ. ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ. ಎಲ್ಲ ಪರಿಸ್ಥಿತಿಗೂ ನಾವು ಸಿದ್ಧವಾಗಿರಬೇಕಾಗುತ್ತದೆ’’ಎಂದು ಫ್ಯಾಶನ್ ಉಡುಪುಗಳ ಬ್ರಾಂಡ್ ಅಟಿಟ್ಯೂಡ್ ಡಾಟ್‌ಕಾಮ್‌ನ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾಗಿರುವ ಗೇಲ್ ಸುದ್ದಿಗಾರರಿಗೆ ತಿಳಿಸಿದರು.

ಭಾರತದ ಕ್ರಿಕೆಟಿಗ ಯುವರಾಜ್ ಯುವಿಕ್ಯಾಬ್ ವೆಂಚರ್ಸ್‌ನಲ್ಲಿ ಹಣಹೂಡಿಕೆ ಮಾಡಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ನೊಯ್ಡಾ ಮೂಲದ ಹೇಲ್ತ್ ಕೇರ್, ಪರ್ಸನಲ್ ಕೇರ್ ಬ್ಯುಸಿನೆಸ್‌ನಲ್ಲಿ ಬಂಡವಾಳ ಹೂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News