×
Ad

ಕಿರ್ಗಿಯೊಸ್ ಮೂರನೆ ಸುತ್ತಿಗೆ, ನಡಾಲ್ ಎದುರಾಳಿ

Update: 2017-05-10 23:35 IST

ಮ್ಯಾಡ್ರಿಡ್, ಮೇ 10: ರಿಯಾನ್ ಹ್ಯಾರಿಸನ್‌ರನ್ನು 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿರುವ ನಿಕ್ ಕಿರ್ಗಿಯೊಸ್ ಮ್ಯಾಡ್ರಿಡ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರ.

ಕಿರ್ಗಿಯೊಸ್ ಮುಂದಿನ ಸುತ್ತಿನಲ್ಲಿ ಸ್ಪೇನಿನ ಸ್ಟಾರ್ ಆಟಗಾರ ರಫೆಲ್ ನಡಾಲ್‌ರನ್ನು ಎದುರಿಸಲಿದ್ದಾರೆ. ಬುಧವಾರ ಇಟಲಿಯ ಫ್ಯಾಬಿಯೊ ಫೋಗ್ನಿನಿ ಅವರನ್ನು ಮಣಿಸಿದ್ದ ನಡಾಲ್ ಮ್ಯಾಡ್ರಿಡ್‌ನಲ್ಲಿ ಐದನೆ ಬಾರಿ ಪ್ರಶಸ್ತಿ ಜಯಿಸುವ ನಿಟ್ಟಿಯಲ್ಲಿ ಶುಭಾರಂಭ ಮಾಡಿದ್ದಾರೆ. ಆಸ್ಟ್ರೇಲಿಯದ ಕಿರ್ಗಿಯೊಸ್ ಹಾಗೂ ನಡಾಲ್ ಈತನಕ ಎರಡು ಬಾರಿ ಮುಖಾಮುಖಿಯಾಗಿದ್ದಾರೆ. 2014ರ ವಿಂಬಲ್ಡನ್ ಟೂರ್ನಿಯಲ್ಲಿ ಕಿರ್ಗಿಯೊಸ್ ಅವರು 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್‌ರನ್ನು ಮಣಿಸಿದ್ದರು.

ಗಿಲ್ಸ್ ಮುಲ್ಲರ್‌ರನ್ನು 6-4, 6-4 ನೇರ ಸೆಟ್‌ಗಳಿಂದ ಮಣಿಸಿದ ಐದನೆ ಶ್ರೇಯಾಂಕದ ಮಿಲೊಸ್ ರಾವೊನಿಕ್ ಅಂತಿಮ-16 ಸುತ್ತಿಗೆ ಪ್ರವೇಶಿಸಿದ್ದಾರೆ. ರಾವೊನಿಕ್ ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು ಎದುರಿಸಲಿದ್ದಾರೆ.

ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗ ಭುಜನೋವಿನಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಡೇವಿಡ್ ಫೆರರ್ ಒಂದು ಚೆಂಡನ್ನು ಎಸೆಯದೇ ಮೂರನೆ ಸುತ್ತಿಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News