×
Ad

ಮೂರನೆ ಟೆಸ್ಟ್: ಉತ್ತಮ ಮೊತ್ತದತ್ತ ವೆಸ್ಟ್‌ಇಂಡೀಸ್

Update: 2017-05-13 23:40 IST

 ಡೊಮಿನಿಕ, ಮೇ 13:ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಚೇಸ್ ಅರ್ಧಶತಕದ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ ಪಾಕಿಸ್ತಾನ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಮುಖ ಮಾಡಿದೆ.

ಪಾಕಿಸ್ತಾನದ ಮೊದಲ ಇನಿಂಗ್ಸ್ 376 ರನ್‌ಗೆ ಉತ್ತರವಾಗಿ ವಿಕೆಟ್ ನಷ್ಟವಿಲ್ಲದೆ 14 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್ ತಂಡ 3ನೆ ದಿನದಾಟದಂತ್ಯಕ್ಕೆ 100 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿದೆ. ನಿನ್ನೆಯ ಮೊತ್ತಕ್ಕೆ 214 ರನ್ ಸೇರಿಸಲಷ್ಟೇ ಶಕ್ತವಾಯಿತು.

ಡೌರಿಚ್(ಅಜೇಯ 20) ಹಾಗೂ ನಾಯಕ ಹೋಲ್ಡರ್(ಅಜೇಯ 11) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಗಾಯಾಳು ನಿವೃತ್ತಿಯಾದ ಚೇಸ್ 129 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 60 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಬ್ರಾತ್ ವೇಟ್(29) ಹಾಗೂ ಪೊವೆಲ್(31) ಮೊದಲ ವಿಕೆಟ್‌ಗೆ 43 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಹೋಪ್(29) ಹಾಗೂ ಹೆಟ್ಮೆಯರ್(17)ಎರಡಂಕೆ ಸ್ಕೋರ್ ದಾಖಲಿಸಿದರು.

ಪಾಕಿಸ್ತಾನದ ಪರ ಯಾಸಿರ್ ಶಾ(3-108) ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಪ್ರಥಮ ಇನಿಂಗ್ಸ್: 376

ವೆಸ್ಟ್‌ಇಂಡೀಸ್: 100 ಓವರ್‌ಗಳಲ್ಲಿ 218/5

(ಚೇಸ್ 60, ಪೊವೆಲ್ 31, ಬ್ರಾತ್‌ವೆಟ್ 29, ಹೋಪ್ 29, ಡೌರಿಚ್ ಅಜೇಯ 20, ಯಾಸಿರ್ ಶಾ 3-108)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News