ಮ್ಯಾಡ್ರಿಡ್ ಓಪನ್: ಸಿಮೊನಾ ಹಾಲೆಪ್‌ಗೆ ಸಿಂಗಲ್ಸ್ ಪ್ರಶಸ್ತಿ
Update: 2017-05-14 22:55 IST
ಮ್ಯಾಡ್ರಿಡ್, ಮೇ 14: ರೋಚಕವಾಗಿ ಸಾಗಿದ ಮ್ಯಾರಥಾನ್ ಫೈನಲ್‌ನಲ್ಲಿ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಕ್‌ರನ್ನು ಮಣಿಸಿದ ರೋಮಾನಿಯದ ಸಿಮೊನಾ ಹಾಲೆಪ್ ಸತತ ಎರಡನೆ ಬಾರಿ ಮ್ಯಾಡ್ರಿಡ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಶನಿವಾರ ಇಲ್ಲಿ ನಡೆದ ಮಹಿಳೆೆಯರ ಸಿಂಗಲ್ಸ್ ಫೈನಲ್‌ನಲ್ಲಿ ಮೂರನೆ ಶ್ರೇಯಾಂಕಿತೆ ಹಾಲೆಪ್ 14ನೆ ಶ್ರೇಯಾಂಕದ ಆಟಗಾರ್ತಿ ಕ್ರಿಸ್ಟಿನಾರನ್ನು 7-5, 6-7(5), 6-2 ಸೆಟ್‌ಗಳ ಅಂತರದಿಂದ ಮಣಿಸಿದರು.
ಹಾಲೆಪ್ ನಾಲ್ಕು ವರ್ಷಗಳಲ್ಲಿ ಮೂರನೆ ಬಾರಿ ಮ್ಯಾಡ್ರಿಡ್ ಓಪನ್ ಫೈನಲ್‌ನಲ್ಲಿ ಆಡಿದರು. 2014ರ ಟೂರ್ನಿಯಲ್ಲಿ ರಶ್ಯದ ಮರಿಯಾ ಶರಪೋವಾ ವಿರುದ್ಧ ಸೋತಿದ್ದರು. ಇದೀಗ ಕ್ರಿಸ್ಟಿನಾರನ್ನು ಸೋಲಿಸಿರುವ ಸಿಮೊನಾ 2014ರ ಬಳಿಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ 2ನೆ ಆಟಗಾರ್ತಿಯಾಗಿದ್ದಾರೆ. 2014ರಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಈ ಸಾಧನೆ ಮಾಡಿದ್ದರು.