×
Ad

ಮಹಿಳಾ ವಿಶ್ವಕಪ್: ಭಾರತ ತಂಡಕ್ಕೆ ಮಿಥಾಲಿ ನಾಯಕಿ

Update: 2017-05-15 23:50 IST

ಹೊಸದಿಲ್ಲಿ, ಮೇ 15: ಮುಂಬರುವ ಐಸಿಸಿ ವನಿತೆಯರ ವಿಶ್ವಕಪ್‌ನಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.

ವಿಶ್ವಕಪ್ ಟೂರ್ನಿಯು ಜೂ.24 ರಿಂದ ಜುಲೈ 23ರ ತನಕ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯಲಿದೆ.

ಬಿಸಿಸಿಐನ ಅಖಿಲ ಭಾರತ ಮಹಿಳಾ ತಂಡದ ಆಯ್ಕೆ ಸಮಿತಿಯು ಸೋಮವಾರ ಇಲ್ಲಿ ಸಭೆ ಸೇರಿ ಮುಂಬರುವ ಟೂರ್ನಮೆಂಟ್‌ಗೆ 15 ಸದಸ್ಯೆಯರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿದೆ.

11ನೆ ಆವೃತ್ತಿಯ ವನಿತೆಯರ ವಿಶ್ವಕಪ್ ಟೂರ್ನಿಯು ಇಂಗ್ಲೆಂಡ್‌ನಲ್ಲಿ ಮೂರನೆ ಬಾರಿ ನಡೆಯುತ್ತಿದೆ. 1973 ಹಾಗೂ 1993ರಲ್ಲಿ ನಡೆದಿತ್ತು. ಭಾರತ ತಂಡ ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ 2005ರ ಆವೃತ್ತಿಯ ಫೈನಲ್‌ಗೆ ತಲುಪಿ ರನ್ನರ್-ಅಪ್ ಆಗಿತ್ತು. ಇದು ವಿಶ್ವಕಪ್‌ನಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿತ್ತು.

ಭಾರತ ತಂಡ: ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್,ವೇದಾ ಕೃಷ್ಣಮೂರ್ತಿ, ಮೋನಾ ಮೆಶ್ರಾಮ್, ಪೂನಮ್ ರಾವತ್, ದೀಪ್ತಿ ಶರ್ಮ, ಜುಲನ್ ಗೋಸ್ವಾಮಿ, ಶಿಖಾ ಪಾಂಡೆ, ಎಕ್ತಾ ಬಿಶ್ತ್, ಸುಶ್ಮಾ ವರ್ಮ, ಮಾನ್ಸಿ ಜೋಶಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News