×
Ad

ಕೊಹ್ಲಿ 2 ರನ್‌ಗಾಗಿ ಬಾರಿಸಿದ ಚೆಂಡು ಮೈದಾನದಿಂದ ಹೊರ ಚಿಮ್ಮಿತು!

Update: 2017-05-16 23:06 IST

 ಬೆಂಗಳೂರು, ಮೇ 16: ಹತ್ತನೆ ಆವೃತ್ತಿಯ ಐಪಿಎಲ್ ಟೂರ್ನಿಯು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 2016ರ ಐಪಿಎಲ್‌ನಲ್ಲಿ 11 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದರು. ಈ ಬಾರಿ ಕೇವಲ 4 ಅರ್ಧಶತಕ ಬಾರಿಸಿದ್ದರು. ಕೊಹ್ಲಿ ರವಿವಾರ ದಿಲ್ಲಿಯಲ್ಲಿ ನಡೆದಿದ್ದ ಡೆಲ್ಲಿ ವಿರುದ್ಧದ ಟೂರ್ನಿಯ ಕೊನೆಯ ಪಂದ್ಯದಲ್ಲಿ 3 ಬೌಂಡರಿ, 3 ಸಿಕ್ಸರ್‌ಗಳಿರುವ 58 ರನ್ ಗಳಿಸಿದ್ದರು. ಕೊಹ್ಲಿ ಬಾರಿಸಿದ ಒಂದು ಸಿಕ್ಸರ್ ಮಾತ್ರ ಅಭಿಮಾನಿಗಳಿಗೆ ನಂಬಲು ಸಾಧ್ಯವಾಗಲಿಲ್ಲ.

ಕೊಹ್ಲಿ 10ರನ್ ಗಳಿಸಿದ್ದಾಗ ಕೋರಿ ಆ್ಯಂಡರ್ಸನ್ ಎಸೆತವನ್ನು ಮೆಲ್ಲನೆ ತಳ್ಳಿದ್ದರು. ಆದರೆ, ಕೊಹ್ಲಿ ಬ್ಯಾಟ್‌ನಿಂದ ಚಿಮ್ಮಿದ ಆ ಚೆಂಡು ನೇರವಾಗಿ ಮೈದಾನದಿಂದ ಹೊರಗೆ ಹೋಯಿತು. 67 ಮೀ. ಉದ್ದದ ಆ ಸಿಕ್ಸರ್ ಟೂರ್ನಿಯ ಶ್ರೇಷ್ಠ ಸಿಕ್ಸರ್ ಎನಿಸಿಕೊಂಡಿತು.

  ‘‘ನಾನು ಎರಡು ರನ್‌ಗಾಗಿ ಚೆಂಡನ್ನು ತಳ್ಳಿದ್ದೆ. ಆದರೆ, ಅದು ಸಿಕ್ಸರ್ ಆಗಿ ಪರಿವರ್ತಿತವಾಗಿತ್ತು. ನನ್ನ ಪ್ರಕಾರ ಆ್ಯಂಡರ್ಸನ್ ಕ್ರಾಸ್-ಸೀಮ್ ಎಸೆತವನ್ನು ಎಸೆದಿದ್ದರು. ನಾನು ಚೆಂಡನ್ನು ಬಾರಿಸಿದ ಶೈಲಿ ಖುಷಿ ನೀಡಿತ್ತು. ನನ್ನ ಇನಿಂಗ್ಸ್‌ನಿಂದ ತಂಡಕ್ಕೆ ಗೆಲುವು ದೊರೆತಿರುವುದು ಸಂತೋಷ ತಂದಿದೆ’’ ಎಂದು ಪಂದ್ಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದರು.

ಕೊಹ್ಲಿಗೆ ಪಾಲಿಗೆ 10ನೆ ಆವೃತ್ತಿಯ ಐಪಿಎಲ್ ಅತ್ಯಂತ ನಿರಾಶಾದಾಯಕವಾಗಿತ್ತು. ಭುಜನೋವಿನಿಂದಾಗಿ ಟೂರ್ನಿಯ ಆರಂಭದಲ್ಲಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಕೊಹ್ಲಿ ಕಳೆದ ವರ್ಷದ ಐಪಿಎಲ್ ಪ್ರದರ್ಶನ ಪುನರಾವರ್ತಿಸಲು ವಿಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News