×
Ad

ಮಳೆ ನಿಂತ ಮೇಲೆ ಕೆಕೆಆರ್ ಗೆಲುವಿನ ಕೇಕೆ

Update: 2017-05-17 23:24 IST

  ಬೆಂಗಳೂರು, ಮೇ 18: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟ್ವೆಂಟಿ-20 ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ ತಂಡ 7 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಮಳೆಬಾಧಿತ ಪಂದ್ಯದಲ್ಲಿ ಗೆಲುವಿಗೆ ಡಿ.ಎಲ್ ನಿಯಮದಂತೆ 48 ರನ್‌ಗಳ ಸವಾಲನ್ನು ಪಡೆದ ಕೋಲ್ಕತಾ ನೈಟ್‌ರೈಡರ್ಸ್‌ ತಂಡ 3 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನೂ 4 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ದಡ ಸೇರಿತು.

ನಾಯಕ ಗೌತಮ್ ಗಂಭೀರ್ ಔಟಾಗದೆ 32 ರನ್(19ಎ, 2ಬೌ,2ಸಿ) ಮತ್ತು ಇಶಾಂತ್ ಜಗ್ಗಿ ಔಟಾಗದೆ 5 ರನ್ ಗಳಿಸಿ ತಂಡದ ಗೆಲುವಿನ ರನ್ ಪೂರೈಸಿದರು.
ಆರಂಭದಲ್ಲಿ ಗೆಲುವಿಗೆ 129 ರನ್‌ಗಳ ಸವಾಲನ್ನು ಪಡೆದಿದ್ದ ಕೋಲ್ಕತಾ ತಂಡದ ಬ್ಯಾಟಿಂಗ್‌ಗೆ ಮಳೆ ಅಡ್ಡಿಸಿತು. ಧಾರಾಕಾರ ಮಳೆಯಿಂದಾಗಿ ಮೂರು ಗಂಟೆಗಳ ಕಾಲ ಆಟ ಆರಂಭಗೊಳ್ಳಲಿಲ್ಲ. ಅಂತಿಮವಾಗಿ ಮಳೆ ನಿಂತಾಗ ಡಕ್‌ವರ್ತ್ ಲೂವಿಸ್ ನಿಯಮದಂತೆ ಕೋಲ್ಕತಾದ ಗೆಲುವಿಗೆ 6 ಓವರ್‌ಗಳಲ್ಲಿ 48 ರನ್‌ಗಳ ಸವಾಲು ವಿಧಿಸಲಾಯಿತು.
 ಸನ್‌ರೈಸರ್ಸ್‌ ಹೈದರಾಬಾದ್ ತಂಡದ ದಾಳಿಗೆ ಸಿಲುಕಿದ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಅಗ್ರಸರದಿಯ ಮೂರು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಆರಂಭಿಕ ದಾಂಡಿಗ ರಾಬಿನ ಉತ್ತಪ್ಪ (1), ಕ್ರಿಸ್ ಲಿನ್(6) ಮತ್ತು ಯೂಸುಫ್ ಪಠಾಣ್(0) ಬೇಗನೆ ಪೆವಿಲಿಯನ್ ಸೇರಿದರು. ಆದರೆ ನಾಯಕ ಗೌತಮ್ ಗಂಭೀರ್ ಮತ್ತು ಜಗ್ಗಿ ತಂಡವನ್ನು ಆಧರಿಸಿದರು. ಇವರು ಮುರಿಯದ ಜೊತೆಯಾಟದಲ್ಲಿ 4ನೆ ವಿಕೆಟ್‌ಗೆ 36 ರನ್‌ಗಳ ಜೊತೆಯಾಟ ನೀಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ದೊಡ್ಡ ಮೊತ್ತದ ಸವಾಲನ್ನು ಸೇರಿಸಲು ಸಾಧ್ಯವಾಗಲಿಲ್ಲ. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 128 ರನ್ ಗಳಿಸಿತು.
ನಾಯಕ ಡೇವಿಡ್ ವಾರ್ನರ್ 37 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್. ಶಿಖರ್ ಧವನ್(11), .ೆಎಸ್ ವಿಲಿಯಮ್ಸನ್(24), ವಿ.ಶಂಕರ್(22) ಮತ್ತು ನಮನ್ ಓಜಾ(16) ಎರಡಂಕೆಯ ಸ್ಕೋರ್ ದಾಖಲಿಸಿದರು. ಯುವರಾಜ್ 9 ರನ್ ಗಳಿಸಿದರು.
ಕೌಲ್ಟರ್ ನೀಲ್ (20ಕ್ಕೆ 3), ಉಮೇಶ್ ಯಾದವ್(21ಕ್ಕೆ 2), ಪಿಯೂಷ್ ಚಾವ್ಲಾ(27ಕ್ಕೆ 1) ಮತ್ತು ಟ್ರೆಂಟ್ ಬೌಲ್ಟ್(30ಕ್ಕೆ 1) ದಾಳಿಗೆ ಸಿಲುಕಿದ ಸನ್‌ರೈಸರ್ಸ್‌ ತಂಡದ ಬ್ಯಾಟಿಂಗ್ ತತ್ತರಿಸಿತು.
 4.2ನೆ ಓವರ್‌ನಲ್ಲಿ ತಂಡದ ಸ್ಕೋರ್ 25ಕ್ಕೆ ತಲುಪುವಾಗ ಸನ್‌ರೈಸರ್ಸ್‌ ಮೊದಲ ವಿಕೆಟ್ ಕಳೆದುಕೊಂಡಿತು. 11 ರನ್ ಗಳಿಸಿದ ಆರಂಭಿಕ ದಾಂಡಿಗ ಶಿಖರ್ ಧವನ್ ನಿರ್ಗಮಿಸಿದರು. ನಾಯಕ ವಾರ್ನರ್ ಮತ್ತು ವಿಲಿಯಮ್ಸನ್ ಎರಡನೆ ವಿಕೆಟ್‌ಗೆ 50 ರನ್‌ಗಳ ಜೊತೆಯಾಟ ನೀಡಿದರು. 12 ಓವರ್‌ನ ಕೊನೆಯ ಎಸೆತದಲ್ಲಿ ವಿಲಿಯಮ್ಸನ್ ಔಟಾದರು. ಮುಂದಿನ ಓವರ್‌ನಲ್ಲಿ ಪಿಯೂಷ್ ಚಾವ್ಲಾ ಎಸೆತದಲ್ಲಿ ನಾಯಕ ವಾರ್ನರ್ ಅವರು ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ಹೈದರಾಬಾದ್‌ನ ಬ್ಯಾಟಿಂಗ್ ಮತ್ತಷ್ಟು ದುರ್ಬಲಗೊಂಡಿತು.
,,,,,,,,,
  ಕೋಲ್ಕತಾ ನೈಟ್‌ರೈಡರ್ಸ್‌ 5.2 ಓವರ್‌ಗಲ್ಲಿ 48/3
        ಉತ್ತಪ್ಪಸಿ ಧವನ್ ಬಿ ಜೋರ್ಡನ್01
        ಲಿನ್ ಸಿ ಓಜಾ ಬಿ ಕುಮಾರ್06
    ಯೂಸುಫ್ ಪಠಾಣ್ ರನೌಟ್(ಕುಮಾರ್)00
            ಗಂಭೀರ್ ಔಟಾಗದೆ32
            ಜಗ್ಗಿ ಔಟಾಗದೆ05
                ಇತರೆ04
ವಿಕೆಟ್ ಪತನ: 1-7, 2-7, 3-12
ಬೌಲಿಂಗ್ ವಿವರ
    ಬಿ. ಕುಮಾರ್ 1.0-0-11-1
    ಜೋರ್ಡನ್1.0-0-09-1
    ರಶೀದ್ ಖಾನ್2.0-0-11-0
    ಎಸ್.ಕೌಲ್ 1.0-0-14-0
    ಬಿಪುಲ್ ಶರ್ಮ0.2-0-02-0
ಪಂದ್ಯಶ್ರೇಷ್ಠ ಕೌಲ್ಟರ್ ನೀಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News