×
Ad

ರಿಯೋ ಗೇಮ್ಸ್‌ನಲ್ಲಿ ಐಒಎ ಅಧಿಕಾರಿಗಳಿಂದ ಸ್ವಜನಪಕ್ಷಪಾತ?

Update: 2017-05-19 23:49 IST

ಹೊಸದಿಲ್ಲಿ, ಮೇ 19: ಕಳೆದ ವರ್ಷ ನಡೆದ ರಿಯೋ ಒಲಿಂಪಿಕ್ಸ್‌ಗೆ ಇಬ್ಬರು ವೃತ್ತಿಪರ ವೈದ್ಯರನ್ನು ಕಳುಹಿಸಿಕೊಟ್ಟ ಸಂದರ್ಭದಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಕೆಲವು ಅಧಿಕಾರಿಗಳು ಸ್ವಜನಪಕ್ಷಪಾತ ಎಸೆಗಿದ್ದಾರೆಂಬ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ನಿರ್ಧರಿಸಿದೆ.

ರಿಯೋ ಗೇಮ್ಸ್‌ಗೆ ಅಥ್ಲೀಟ್‌ಗಳೊಂದಿಗೆ ತೆರಳಿದ್ದ ಡಾ.ಪವನ್ ದೀಪ್ ಸಿಂಗ್ ಹಾಗೂ ಆರ್.ಎಸ್. ನೇಗಿ ಒಲಿಂಪಿಕ್ಸ್‌ಗೆ ತೆರಳುವ ಅಗತ್ಯದ ಅರ್ಹತೆ ಹಾಗೂ ಅನುಭವವನ್ನು ಹೊಂದಿರಲಿಲ್ಲ. ಆದರೆ, 2016ರ ಜುಲೈ 24 ರಿಂದ 2016ರ ಆ.23ರ ತನಕ ನಡೆದಿದ್ದ ಗೇಮ್ಸ್‌ಗೆ ಭಾರತೀಯ ತಂಡದೊಂದಿಗೆ ಅವರನ್ನು ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಲಾಗಿದೆ.

ಇಬ್ಬರು ಅಯೋಗ್ಯ ವೈದ್ಯರನ್ನು ಒಲಿಂಪಿಕ್ಸ್ ತಂಡದಲ್ಲಿ ಕಳುಹಿಸಿಕೊಟ್ಟಿದ್ದರ ಹಿಂದೆ ಐಒಎನ ಕೆಲವು ನಿರ್ದಿಷ್ಟ ಅಧಿಕಾರಿಗಳ ಸ್ವಜನಪಕ್ಷಪಾತ, ಅವ್ಯವಹಾರದ ಪಾತ್ರವಿದೆಯೇ ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ಸಿಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News